RCB ಕ್ಯಾಪ್ಟನ್‌ ಆಗಿ ಆಯ್ಕೆ: ಕನ್ನಡದಲ್ಲಿಯೇ ಧನ್ಯವಾದ ತಿಳಿಸಿದ ಪಾಟೀದಾರ್

ಹುಬ್ಬಳ್ಳಿ: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ನಾಯಕನಾಗಿ ಆಯ್ಕೆಯಾದ ಬಳಿಕ ರಜತ್‌ ಪಾಟೀದಾರ್‌ ಮೊದಲ ಬಾರಿ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ನೀಡಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಬರೆದುಕೊಂಡಿರುವ ಅವರು, “ಪ್ರೀತಿಯ ನಮ್ಮ RCB ಅಭಿಮಾನಿಗಳೇ, ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ ಮತ್ತು ವಿರಾಟ್ ಕೊಹ್ಲಿ ಮುನ್ನಡೆಸಿದ ಈ ತಂಡವನ್ನು ಮುನ್ನಡೆಸಲು ನನಗೆ ಅವಕಾಶ ಮಾಡಿಕೊಟ್ಟ ತಂಡದ ಮ್ಯಾನಜೆಮೆಂಟ್‌ಗೆ ಧನ್ಯವಾದಗಳು. ನಿಮ್ಮ ಅಭಿಮಾನ‌ ಹೀಗೆ ಇರಲಿ” ಎಂದು ಹೇಳಿದ್ದಾರೆ.