RCBಗೆ RPಯ ನಾಯಕತ್ವ
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ಇಂದು ಹೊಸ ನಾಯಕನ ಹೆಸರು ಪ್ರಕಟಿಸಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೊಸ ನಾಯಕನಾಗಿ ರಜತ್ ಪಾಟೀದಾರ್ ಹೊರಹೊಮ್ಮಿದ್ದಾರೆ. ಕಳೆದ 4 ಆವೃತ್ತಿಗಳಲ್ಲಿ ತಂಡವನ್ನು ದಕ್ಷಿಣ ಆಫ್ರಿಕಾದ ಫಾಫ್ ಡು ಪ್ಲೆಸಿ ಮುನ್ನಡೆಸಿದ್ದರು. ಆದರೆ ಕಳೆದ ಬಾರಿ ಹರಾಜಿಗೂ ಮುನ್ನ ಅವರನ್ನು ತಂಡದಿಂದ ಕೈ ಬಿಡಲಾಗಿತ್ತು. ಹೀಗಾಗಿ ವಿರಾಟ್ ಕೊಹ್ಲಿ ನಾಯಕತ್ವ ರೇಸ್‌ನಲ್ಲಿರುವ ಪ್ರಮುಖ ಆಟಗಾರ ಎಂದೇ ವಿಶ್ಲೇಷಿಸಲಾಗುತ್ತಿತ್ತು. ಅವರು 2011ರಿಂದ 2023ರ ನಡುವೆ 143 ಪಂದ್ಯಗಳಿಗೆ ನಾಯಕರಾಗಿದ್ದರು. ಆದರೆ ಮತ್ತೆ ನಾಯಕರಾಗಲು ಕೊಹ್ಲಿ ನಿರಾಕರಿಸಿದ್ದರು, ಹೀಗಾಗಿ ಈ ಭಾರಿ ಮಧ್ಯ ಪ್ರದೇಶ ತಂಡವನ್ನು ಮುನ್ನಡೆಸಿದ ಅನುಭವವಿರುವ ರಜತ್ ಪಾಟೀದಾರ್ ನಾಯಕತ್ವದ ರೇಸ್‌ನಲ್ಲಿ ಇದ್ದರು, ಉಳಿದಂತೆ ಭುವನೇಶ್ವರ್ ಕುಮಾರ್, ಕೃನಾಲ್ ಪಾಂಡ್ಯ, ಇಂಗ್ಲೆಂಡ್‌ನ ಫಿಲ್ ಸಾಲ್ಟ್, ಲಿವಿಂಗ್‌ಸ್ಟೋನ್ ತಂಡದಲ್ಲಿರುವ ಪ್ರಮುಖರು. 9 ವರ್ಷಗಳ ಕಾಲ ಆರ್‌ಸಿಬಿ ಕ್ಯಾಪ್ಟನ್ ಆಗಿ ತಂಡವನ್ನು 145 ಪಂದ್ಯಗಳಲ್ಲಿ ಮುನ್ನಡೆಸಿರುವ ವಿರಾಟ್ ಕೊಹ್ಲಿ 66 ಪಂದ್ಯಗಳಲ್ಲಿ ಜಯ ತಂದುಕೊಟ್ಟಿದ್ದಾರೆ. ಅಲ್ಲದೇ ಕಿಂಗ್ ಕೊಹ್ಲಿ ನಾಯಕತ್ವದಲ್ಲೇ ಆರ್‌ಸಿಬಿ 2016ರಲ್ಲಿ ಫೈನಲ್‌ಗೆ ಪ್ರವೇಶಿಸಿದರೆ, 3ಬಾರಿ ಪ್ಲೇಆಫ್ ಆಡಿತ್ತು. ವಿರಾಟ್ ಕೊಹ್ಲಿ ಮತ್ತೆ ನಾಯಕರಾಗಲು ಕೊಹ್ಲಿ ನಿರಾಕರಿಸಿದ್ದರು ಹಾಗಾಗಿ ರಜತ್ ಪಾಟೀದಾರ್ ನಾಯಕನಾಗಿ ಹೊರಹೊಮ್ಮಿದ್ದಾರೆ.
