ಪ್ರಯಾಗ್‌ರಾಜ್‌ನಲ್ಲಿ 3 ದಿನಗಳ ಕಾಲ ಅಂತಾರಾಷ್ಟ್ರೀಯ ಪಕ್ಷಿ ಉತ್ಸವ

0
38

ಫೆಬ್ರವರಿ 16ರಿಂದ18ರವರೆಗೆ ಅಂತಾರಾಷ್ಟ್ರೀಯ ಪಕ್ಷಿ ಉತ್ಸವ

ಉತ್ತರ ಪ್ರದೇಶ: ಪ್ರಯಾಗ್​ರಾಜ್​ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಫೆಬ್ರವರಿ 16 ರಿಂದ ಪ್ರಯಾಗ್‌ರಾಜ್‌ನಲ್ಲಿ 3 ದಿನಗಳ ಅಂತರರಾಷ್ಟ್ರೀಯ ಪಕ್ಷಿ ಉತ್ಸವ ನಡೆಯಲಿದೆ.
ಮಹಾಕುಂಭಮೇಳ 2025 ಕ್ಕೆ ಭೇಟಿ ನೀಡುವವರಿಗೆ 200 ಕ್ಕೂ ಹೆಚ್ಚು ಜಾತಿಯ ವಲಸೆ ಮತ್ತು ಸ್ಥಳೀಯ ಪಕ್ಷಿಗಳನ್ನು ವೀಕ್ಷಿಸುವ ಅವಕಾಶವಿರುತ್ತದೆ. ಫೆಬ್ರವರಿ 16ರಿಂದ18ರವರೆಗೆ ಅಂತಾರಾಷ್ಟ್ರೀಯ ಪಕ್ಷಿ ಉತ್ಸವವನ್ನು ಆಯೋಜಿಸಲಾಗಿದ್ದು,
ಈ ಬಾರಿಯ ಮಹಾಕುಂಭವು ಆಧ್ಯಾತ್ಮಿಕ ನಂಬಿಕೆಯ ಸಂಕೇತವಾಗುವುದಲ್ಲದೆ, ಪ್ರಕೃತಿ ಮತ್ತು ಪರಿಸರದ ಸಂರಕ್ಷಣೆಯತ್ತ ಗಮನ ಹರಿಸಿದೆ. ಸೈಬೀರಿಯಾ, ಮಂಗೋಲಿಯಾ ಮತ್ತು ಅಫ್ಘಾನಿಸ್ತಾನ ಸೇರಿದಂತೆ 10 ಕ್ಕೂ ಹೆಚ್ಚು ದೇಶಗಳ ಸೈಬೀರಿಯನ್ ಪಕ್ಷಿಗಳು ಮಹಾ ಕುಂಭದಲ್ಲಿ ಇರಲಿದ್ದು ಇಲ್ಲಿ 200 ಜಾತಿಯ ಪಕ್ಷಿಗಳಿರಲಿವೆ.

ಪಕ್ಷಿ ಸಂರಕ್ಷಣೆಯ ಬಗ್ಗೆ ಭಕ್ತರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಫೆಬ್ರವರಿ 16 ರಿಂದ ಅಂತಾರಾಷ್ಟ್ರೀಯ ಪಕ್ಷಿ ಉತ್ಸವವನ್ನು ಆಯೋಜಿಸಲಾಗುವುದು. ಫೆಬ್ರವರಿ 18 ರವರೆಗೆ ನಡೆಯುವ ಈ ಕಾರ್ಯಕ್ರಮದಲ್ಲಿ ಹೆಸರಾಂತ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಂರಕ್ಷಣಾವಾದಿಗಳು, ವಿಜ್ಞಾನಿಗಳು, ಪಕ್ಷಿವಿಜ್ಞಾನಿಗಳು, ಪರಿಸರ ವಿಜ್ಞಾನ ಮತ್ತು ಪರಿಸರ ಪ್ರಕೃತಿ ಸಂರಕ್ಷಣಾ ಕ್ಷೇತ್ರದ ತಾಂತ್ರಿಕ ತಜ್ಞರು, ಪಕ್ಷಿ ಪ್ರಿಯರು, ಶಾಲಾ-ಕಾಲೇಜು ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಪ್ರದರ್ಶನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬೀದಿ ನಾಟಕಗಳು, ಚಿತ್ರಕಲಾ ಪ್ರದರ್ಶನ ಮತ್ತು ಇತರ ಸಾಂಸ್ಕೃತಿಕ ಚಟುವಟಿಕೆಗಳು ಇರಲಿವೆ. ಭಾಗವಹಿಸುವವರು 10 ಸಾವಿರ ರೂ.ಗಳಿಂದ 5 ಲಕ್ಷ ರೂ.ಗಳವರೆಗೆ ಗೆಲ್ಲುವ ಅವಕಾಶವನ್ನು ಪಡೆಯುತ್ತಾರೆ, ಒಟ್ಟು 21 ಲಕ್ಷ ರೂ.ಗಳವರೆಗೆ ಗೆಲ್ಲಬಹುದು. ಹೆಚ್ಚಿನ ಮಾಹಿತಿಗಾಗಿ ನೀವು 9319277004 ಗೆ ವಾಟ್ಸಾಪ್ ಮೂಲಕ ಸಂಪರ್ಕಿಸಬಹುದು ಎಂದು ಪ್ರಯಾಗ್‌ರಾಜ್‌ನ ಅರಣ್ಯ ಇಲಾಖೆ ತಿಳಿಸಿದೆ.

Previous articleಬಿಜೆಪಿ ಸರ್ಕಾರದ ಯೋಜನೆಗಳು ಎಂಬ ಕಾರಣಕ್ಕೆ ಮೂಲೆಗೆ…
Next articleಮುಡಾ ಪ್ರಕರಣ: ಸುಪ್ರೀಂಗೆ ಮೇಲ್ಮನವಿ ಸಲ್ಲಿಸುವುದಿಲ್ಲ