ನವಗ್ರಹ ಸಿನಿಮಾದ ನಟ ಗಿರಿ ದಿನೇಶ್​ ಇನ್ನಿಲ್ಲ

0
16

ಬೆಂಗಳೂರು: ನವಗ್ರಹ ಸಿನಿಮಾದಕನ್ನಡದ ಖ್ಯಾತ ಖಳನಟ ದಿನೇಶ್ ಅವರ ಪುತ್ರ, ಗಿರಿ ದಿನೇಶ್ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಶುಕ್ರವಾರ ಸಂಜೆ ಮನೆಯಲ್ಲಿ ಪೂಜೆ ಮಾಡುವ ವೇಳೆ ಗಿರಿ ದಿನೇಶ್​ ಅವರು ಹೃದಯಾಘಾತದಿಂದ ಕುಸಿದು ಬಿದ್ದಿದ್ದರು. ತಕ್ಷಣ ಗಿರಿ ದಿನೇಶ್​ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿ ಮಧ್ಯೆಯೇ ನಿಧನರಾಗಿದ್ದಾರೆ. ಅವರ ಅಂತ್ಯಸಂಸ್ಕಾರ ಇಂದು ನೆರವೇರಲಿದೆ. ಕನ್ನಡ ಸಿನಿಮಾದಲ್ಲಿ ಟ್ರೆಂಡ್‌ಸೆಟ್ಟರ್‌ ಆಗಿದ್ದ ನವಗ್ರಹ ಸಿನಿಮಾದಲ್ಲಿ 9 ಮಂದಿ ಖಳನಟರ ಪುತ್ರರು ನಟಿಸಿದ್ದರು. ಇದರಲ್ಲಿ ಹಿರಿಯ ಖಳನಟ ಹಾಗೂ ಹಾಸ್ಯನಟ ದಿನೇಶ್‌ ಅವರ ಪುತ್ರ ಗಿರಿ ಕೂಡ ಒಬ್ಬರಾಗಿದ್ದರು. ಆ ಬಳಿಕ ಅವರು ಚಮ್ಕಾಯ್ಸು ಚಿಂದಿ ಉಡಾಯ್ಸು , ವಜ್ರ ಸಿನಿಮಾದಲ್ಲಿಯೂ ನಟಿಸಿದ್ದರು. ಆ ನಂತರ ಅವರು ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಲಿಲ್ಲ. ಆದರೆ ನವಗ್ರಹ ಚಿತ್ರದ ಶೆಟ್ಟಿ ಪಾತ್ರ ಹೆಚ್ಚಿನ ಹೆಸರು ತಂದುಕೊಟ್ಟಿತ್ತು. 2008ರಲ್ಲಿ ಬಿಡುಗಡೆಯಾದ ನವಗ್ರಹ ಸಿನಿಮಾದಲ್ಲಿ ಖ್ಯಾತ ಖಳನಟನಾಗಿ ಮನೆಮಾತಾಗಿದ್ದರು. ಈ ಚಿತ್ರ ಕಳೆದ ವರ್ಷ ನವೆಂಬರ್​ 8ರಂದು ಮರುಬಿಡುಗಡೆಯಾಗಿತ್ತು.

Previous articleರಾಹುಲ್ ಜಾರಕಿಹೊಳಿ ಭರ್ಜರಿ ಜಯ
Next articleಬಿಜೆಪಿಗೆ ಮುನ್ನಡೆ, ಮತದಾರನ ಒಲವು ಯಾರ ಕಡೆ…