ಗದಗ: ರಾಜ್ಯ ಸರಕಾರ ಮೈಕ್ರೋ ಫೈನಾನ್ಸ್‌ಗಳ ಅಟ್ಟಹಾಸಕ್ಕೆ ಕಡಿವಾಣ ಹಾಕಲು ಸುಗ್ರೀವಾಜ್ಞೆ ಹೊರಡಿಸಲು ತಯಾರಿ ನಡೆಸುತ್ತಿರುವ ಸಂದರ್ಭದಲ್ಲಿಯೇ ಮೈಕ್ರೋ ಫೈನಾನ್ಸ್ ಕಂಪನಿಯ ಕಿರುಕುಳಕ್ಕೆ ಬೆದರಿ ದಂಪತಿ ಊರು ತೊರೆದಿರುವ ಪ್ರಕರಣ ಶಿರಹಟ್ಟಿ ತಾಲೂಕು ಖಾನಾಪುರದಲ್ಲಿ ಬೆಳಕಿಗೆ ಬಂದಿದೆ.
ಫೈನಾನ್ಸ್ ಕಂಪನಿಯ ಸಿಬ್ಬಂದಿ ಕಿರುಕುಳಕ್ಕೆ ಮನೆ ತೊರೆದಿರುವ ದಂಪತಿ ನಿರ್ಗತಿಕರಂತೆ ಗದಗದ ಸ್ಲಂನಲ್ಲಿ ವಾಸಿಸುತ್ತಿದ್ದಾರೆ.
ಮೈಕ್ರೋ ಫೈನಾನ್ಸ್ ಕಂಪನಿಯ ಸಿಬ್ಬಂದಿಯ ಅವಾಚ್ಯ ಶಬ್ದಗಳ ನಿಂದನೆ, ಕಿರುಕುಳಕ್ಕೆ ಬೆದರಿ ಮನೆಯೊಡತಿ ಬಾವಿಯಲ್ಲಿ ಜಿಗಿದು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾಳೆ. ಮನೆಯ ಸದಸ್ಯರ ಸಮಯಪ್ರಜ್ಞೆಯಿಂದ ಮಹಿಳೆಯನ್ನು ರಕ್ಷಿಸಲಾಗಿದೆ. ದಂಪತಿ ಮನೆ ತೊರೆದ ತಕ್ಷಣವೇ ಮೈಕ್ರೋ ಫೈನಾನ್ಸ್ ಕಂಪನಿ ಸಿಬ್ಬಂದಿ ಮನೆಗೆ ಕೆಂಪು ಅಕ್ಷರದಲ್ಲಿ ಸಾಲಕ್ಕೆ ಮನೆಯನ್ನು ಅಡಮಾನವಿಡಲಾಗಿದೆಯೆಂದು ಬರೆಸಿದೆ.