ಮುಡಾ ಕೇಸ್, ಪೋಕ್ಸೊ ಕೇಸ್, ಹೈಕೋರ್ಟ್ ಅಂತಿಮ ಆದೇಶ ಇಂದು ಸಿದ್ದರಾಮಯ್ಯ, ಬಿಎಸ್‌ವೈಗೆ ಇಂದು ಬಿಗ್ ಡೇ

0
19

ಧಾರವಾಡ : ಮುಡಾ ಪ್ರಕರಣ ತನಿಖೆಯನ್ನು ಲೋಕಾಯುಕ್ತದ ಬದಲು ಸಿಬಿಐಗೆ ವಹಿಸಬೇಕು ಎಂದು ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಹೈಕೋರ್ಟ್ ಗೆ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ್ದು, ಇಂದು ಏಕಸದಸ್ಯ ಪೀಠದ ನ್ಯಾಯಾಧೀಶ ಎಂ ನಾಗಪ್ರಸನ್ನ ಅವರು ಧಾರವಾಡ ಹೈಕೋರ್ಟ್ ನಲ್ಲಿ ಬೆಳಿಗ್ಗೆ 10.30 ಕ್ಕೆ ಆದೇಶ ಪ್ರಕಟಿಸಲಿದ್ದಾರೆ.

ಜನವರಿ 27 ರಂದು ವಿಚಾರಣೆ ಪೂರ್ಣಗೊಳಿಸಿದ್ದ ನ್ಯಾಯಾಧೀಶರು ತೀರ್ಪು ಕಾಯ್ದಿರಿಸಿದ್ದರು. ಇಂದು ತೀರ್ಪು ಪ್ರಕಟಿಸಲಿದ್ದಾರೆ.

ಒಂದು ವೇಳೆ ಪ್ರಕರಣವನ್ನು ಸಿಬಿಐಗೆ ವಹಿಸಲು ಹೈಕೋರ್ಟ್ ಆದೇಶ ಹೊರ ಬಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂಕಷ್ಟ ಎದುರಾಗಲಿದೆ.

ಅದೇ ರೀತಿ, ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ವಿರುದ್ಧ ದಾಖಲಾದ ಪೋಕ್ಸೊ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಚಾರಣೆಯೂ ಮುಗಿದಿದ್ದು, ಇಂದೇ ಇದೇ ಪೀಠದಲ್ಲಿ ಆದೇಶ ಹೊರ ಬೀಳಲಿದೆ.

ಪೋಕ್ಸೊ ಕೇಸ್ ರದ್ದುಗೊಳಿಸುವಂತೆ ಕೋರಿ ಬಿಎಸ್ ವೈ ಸಲ್ಲಿಸಿದ್ದ ಅರ್ಜಿ ಏನಾದರೂ ತಿರಸ್ಕೃತವಾದರೆ ಅವರಿಗೂ ಸಂಕಷ್ಟ ತಪ್ಪಿದ್ದಲ್ಲ.

ಹೀಗಾಗಿ, ಹಾಲಿ ಮತ್ತು ಮಾಜಿ ಮುಖ್ಯಮಂತ್ರಿಗಳಿಗೆ ಈ ದಿನ ಬಿಗ್ ಡೇ ಆಗಿರಲಿದೆ.

Previous articleಮನೆ ದರೋಡೆಕೋರರನ್ನು ತಳಿಸಿದ ಗ್ರಾಮಸ್ಥರು
Next article5 ವರ್ಷದ ಬಳಿಕ ರೆಪೋ ದರ ಕಡಿತ ಮಾಡಿದ RBI