ಶಿವಮೊಗ್ಗ: ಹಾಡಹಗಲೇ ಬಸ್ ಚಾಲಕನಿಗೆ ಚಾಕುವಿನಿಂದ ಯುವಕನಿಗೆ ಇರಿದಿರುವ ಘಟನೆ ವರದಿಯಾಗಿದೆ. ಚಾಕು ಇರಿತಕ್ಕೆ ಒಳಗಾದವನನ್ನ ಸಿಟಿ ಬಸ್ ಚಾಲಕ ರವಿ ಕುಮಾರ್(೩೪) ಎಂದು ಗುರುತಿಸಲಾಗಿದೆ.
ಅಡುಗೆ ಕಂಟ್ರ್ಯಾಕ್ಟರ್ ಅರುಣ್ ಎಂಬಾತ ಚಾಕುವಿನಿಂದ ಇರಿದ ಆರೋಪಿ ಎಂದು ಗುರುತಿಸಲಾಗಿದೆ. ನೋಡು ನೋಡುತ್ತಲೇ ಅಡುಗೆ ಕಂಟ್ರ್ಯಾಕ್ಟರ್ ಅರುಣ್ ಚಾಲಕ ರವಿಯ ಕಣ್ಣಿಗೆ ಕವರ್‌ನಲ್ಲಿದ್ದ ಖಾರದ ಪುಡಿ ಎರಚಿ ಚಾಕುವಿನಿಂದ ಇರಿದಿದ್ದಾನೆ.
ಶರಾವತಿ ನಗರದ ೩ನೇ ತಿರುವಿನಲ್ಲಿ ಘಟನೆ ನಡೆದಿದೆ. ಹಳೆಯ ದ್ವೇಷದ ಹಿನ್ನಲೆಯಲ್ಲಿ ಚಾಕು ಇರಿತ ಉಂಟಾಗಿದೆ ಎನ್ನಲಾಗಿದೆ. ಚಾಕುವಿನಿಂದ ಚುಚ್ಚುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ರವಿಕುಮಾರ್‌ಗೆ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.
ಸದ್ಯ ಪ್ರಾಣಾಪಾಯದಿಂದ ಚಾಲಕ ರವಿಕುಮಾರ್ ಪಾರಾಗಿರುವುದಾಗಿ ತಿಳಿದು ಬಂದಿದೆ. ರವಿ ಕುಟುಂಬದವರೊಬ್ಬರಿಗೆ ಅರುಣ್ ಮೊಬೈಲ್‌ನಲ್ಲಿ ಮೇಸೆಜ್ ಕಳಿಸುತ್ತಿದ್ದ ಎಂಬ ವಿಚಾರಕ್ಕೆ ಗಲಾಟೆ ನಡೆದಿದೆ ಎನ್ನಲಾಗಿದೆ.
ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.