ದಾವಣಗೆರೆ: ದೇಶದ ಗಡಿ ಭಾಗಗಳಾದ ಜಮ್ಮು, ಕಾಶ್ಮೀರ್, ಪಂಜಾಬ್, ರಾಜಸ್ಥಾನ್, ಅಸ್ಸಾಂ ಸೇರಿದಂತೆ ವಿವಿಧೆಡೆ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ, ನಿವೃತ್ತರಾದ ಬಲ್ಲೂರು ಗ್ರಾಮದಶ್ರೀ ಬಸವರಾಜ್ ರನ್ನು ಮಂಗಳವಾರ ಭವ್ಯವಾಗಿ ಸ್ವಾಗತಿಸಲಾಯಿತು.
ಪುಷ್ಪ ಗುಚ್ಛ ನೀಡಿ , ಆರತಿ ಬೆಳಗಿ ಜಯಕಾರ ಹಾಕಿ ಅಭಿನಂದಿಸಲಾಯಿತು.ಜನ ಶತಾಬ್ದಿ ರೈಲಿನಲ್ಲಿ ಬಂದ ಯೋಧನಿಗೆ ಸಾರ್ವಜನಿಕರು ಸಹ ಕೈ ಮಿಲಾಯಿಸಿ ಸ್ವಾಗತಿಸಿದರು. ಮಹಾನಗರ ಪಾಲಿಕೆ ಬಿಜೆಪಿ ಸದಸ್ಯ ಎಸ್.ಟಿ. ವೀರೇಶ್, ಕೊಳೆನಹಳ್ಳಿ ಸತೇಶ್ ಸೇರಿದಂತೆ ಇತರರು ಇದ್ದರು
