ಚಿಂತಕರ ಚಾವಡಿಯಲ್ಲಿ ಮಿಥ್ಯಾರೋಪ ಮಾಡಿ ಘನತೆಗೆ ಚ್ಯುತಿ ತರಬೇಡಿ

0
111

ಸಲಹೆ, ಸೂಚನೆಗಳನ್ನು ಸರ್ಕಾರಕ್ಕೆ ನೀಡಬೇಕೆ ಹೊರತು ಇಲ್ಲ ಸಲ್ಲದ ಮಿಥ್ಯ ಆರೋಪಗಳನ್ನು ಮಾಡಬಾರದು

ಬೆಂಗಳೂರು: ‘ಚಿಂತಕರ ಚಾವಡಿ’ ಎಂದೇ ಪ್ರಸಿದ್ದವಾದ ರಾಜ್ಯ ಸಭೆಯಲ್ಲಿ ಮಿಥ್ಯಾರೋಪವನ್ನು ಮಾಡಿಕೊಂಡು ನಿಮ್ಮ ಘನತೆಗೆ ಚ್ಯುತಿ ತರಬೇಡಿ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಸಂಯುಕ್ತ ಕರ್ನಾಟಕ ವರದಿ ಹಂಚಿಕೊಂಡು ಪೋಸ್ಟ್‌ ಮಾಡಿದ್ದು ಮಾನ್ಯ ಮಲ್ಲಿಕಾರ್ಜುನ ಖರ್ಗೆ ಅವರು ರಚನಾತ್ಮಕ ಟೀಕೆಗಳನ್ನು, ಸಲಹೆ, ಸೂಚನೆಗಳನ್ನು ಸರ್ಕಾರಕ್ಕೆ ನೀಡಬೇಕೆ ಹೊರತು ಇಲ್ಲ ಸಲ್ಲದ ಮಿಥ್ಯ ಆರೋಪಗಳನ್ನು ಮಾಡಬಾರದು.

ಮೌನಿ ಅಮಾವಾಸ್ಯೆಯಂದು ಪ್ರಯಾಗ್ ರಾಜ್ ನಲ್ಲಿ ಆದ ದುರಂತ ದುರದೃಷ್ಟಕರ, ಆದರೆ, ಉತ್ತರ ಪ್ರದೇಶ ಸರ್ಕಾರ ಈ ರೀತಿಯಾದ ಅವಘಡ ಆಗದಂತೆ ಕ್ರಮ ವಹಿಸಿದೆ. ಖುದ್ದು ಸಿ.ಎಂ. ಯೋಗಿ ಆದಿತ್ಯನಾಥರೇ ಅಹರ್ನಿಶಿ ಯಾವುದೇ ಭಂಗ, ಅಪಾಯ ಆಗದಂತೆ ನೋಡಿಕೊಳ್ಳುತ್ತಿದ್ದಾರೆ.

ತಾವು ಕಲ್ಬುರ್ಗಿಯ ಅಭಿವೃದ್ಧಿ ಬಗ್ಗೆ ಯೋಚಿಸಿ, ಅತ್ಯಂತ ಹಿಂದುಳಿದ ಜಿಲ್ಲೆಯನ್ನು ಅಭಿವೃದ್ಧಿಗೊಳಿಸಲು ಹೊಸ ಯೋಜನೆಗಳನ್ನು ರೂಪಿಸಿ, ಕಾರ್ಯಗತ ಗೊಳಿಸಿ. ‘ಚಿಂತಕರ ಚಾವಡಿ’ ಎಂದೇ ಪ್ರಸಿದ್ದವಾದ ರಾಜ್ಯ ಸಭೆಯಲ್ಲಿ ಮಿಥ್ಯಾರೋಪವನ್ನು ಮಾಡಿಕೊಂಡು ನಿಮ್ಮ ಘನತೆಗೆ ಚ್ಯುತಿ ತರಬೇಡಿ ಎಂದಿದ್ದಾರೆ.

Previous articleಎರಡು ಸರಕು ರೈಲುಗಳು ಡಿಕ್ಕಿ
Next articleನಿವೃತ್ತ ಸೇನಾನಿಗೆ ಭಾರೀ ಸ್ವಾಗತ