ಅಹಿಂಸಾ ಮೂಲತತ್ವದ ಜೈನ ಧರ್ಮದ ಆದರ್ಶಗಳ ಮೇಲೆ ದೇಶದ ಪರಂಪರೆ ಹಾಗೂ ಸಾಂಸ್ಕೃತಿಕ ಇತಿಹಾಸ ನಿರ್ಮಾಣ
ಭಾರತದ ಪರಂಪರೆಯ ಜೈನ ಧರ್ಮದ ಕೆಲಸಗಳಿಗೆ ನಮ್ಮ ಸಹಕಾರ ಸದಾ ಇರುತ್ತದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಹುಬ್ಬಳ್ಳಿ ತಾಲೂಕಿನ ವರೂರಿನ ನವಗ್ರಹ ತೀರ್ಥಕ್ಷೇತ್ರಕ್ಕೆ ಭೇಟಿ ನೀಡಿರುವ ಅವರು ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಪೋಸ್ಟ್ ಮಾಡಿದ್ದು ಆಧ್ಯಾತ್ಮ ಮತ್ತು ನಂಬಿಕೆ ವ್ಯಕ್ತಿಗತವಾದುದು, ನಂಬಿಕೆಗಳ ಬಗ್ಗೆ ಪ್ರತಿಯೊಬ್ಬರಲ್ಲೂ ವಿಭಿನ್ನವಾದ ಅಭಿಪ್ರಾಯಗಳಿರುತ್ತವೆ.
ವ್ಯಕ್ತಿಗತವಾದ ನಂಬಿಕೆಗಳನ್ನು, ಶ್ರದ್ದಾ ಭಕ್ತಿಗಳನ್ನು ಪರಸ್ಪರ ಗೌರವಿಸುವುದರಲ್ಲಿ ಬದುಕಿನ ನಿಜಾರ್ಥವಿದೆ. ಹಿಂದೊಂದು ಕಾಲದಲ್ಲಿ ಜೈನ ಧರ್ಮವು ಭಾರತದ ಉದ್ದಗಲಕ್ಕೆ ವ್ಯಾಪಕವಾಗಿ ಹರಡಿಕೊಂಡಿತ್ತು, ಅಹಿಂಸಾ ಮೂಲತತ್ವದ ಜೈನ ಧರ್ಮದ ಆದರ್ಶಗಳ ಮೇಲೆ ದೇಶದ ಪರಂಪರೆ ಹಾಗೂ ಸಾಂಸ್ಕೃತಿಕ ಇತಿಹಾಸ ನಿರ್ಮಾಣಗೊಂಡಿದೆ.
ಹುಬ್ಬಳ್ಳಿ ತಾಲೂಕಿನ ವರೂರಿನ ನವಗ್ರಹ ತೀರ್ಥಕ್ಷೇತ್ರಕ್ಕೆ ಭೇಟಿ ನೀಡಿ ಇತ್ತೀಚೆಗೆ ಲೋಕಾರ್ಪಣೆಗೊಂಡ ಪ್ರಪಂಚದ ಎಕಮೇವ ೪೦೫ ಅಡಿ ಎತ್ತರದ ಸುಮೇರು ಪರ್ವತವನ್ನು ವೀಕ್ಷಿಸಿದೆ, ಪೂಜ್ಯ ಗುಣದರನಂದಿ ಮಹಾರಾಜರ ಆಶೀರ್ವಾದ ಪಡೆದೆ. ಜೈನರ ಬಹು ನಂಬಿಕೆಯ ಈ ಕ್ಷೇತ್ರಕ್ಕೆ ಸರ್ಕಾರದ ವತಿಯಿಂದ ಯಾವುದೇ ಸಹಕಾರ ಬೇಕಿದ್ದಲ್ಲಿ ಶೀಘ್ರವಾಗಿ ಆಸಕ್ತಿ ವಹಿಸಿ ನೆರವು ನೀಡುತ್ತೇನೆ. ಭಾರತದ ಪರಂಪರೆಯ ಜೈನ ಧರ್ಮದ ಕೆಲಸಗಳಿಗೆ ನಮ್ಮ ಸಹಕಾರ ಸದಾ ಇರುತ್ತದೆ ಎಂದಿದ್ದಾರೆ.