27ರಿಂದ ವಿಧಾನಸೌಧದಲ್ಲಿ ಪುಸ್ತಕ, ಸಾಂಸ್ಕೃತಿಕ ಉತ್ಸವ

ಮಂಗಳೂರು: ರಾಜ್ಯದ ವಿಧಾನಸಭೆಯ ಸಚಿವಾಲಯದ ವತಿಯಿಂದ ಇದೇ ಮೊದಲ ಬಾರಿಗೆ ವಿಧಾನಸೌಧದಲ್ಲಿ ಪುಸ್ತಕ, ಸಾಂಸ್ಕೃತಿಕ ಮತ್ತು ಆಹಾರ ಮೇಳ ನಡೆಯಲಿದೆ.
ಮಂಗಳೂರಿನಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್, ಫೆ. ೨೭ರಿಂದ ಮಾರ್ಚ್ ಮೂರರವರೆಗೆ ನಡೆಯಲಿರುವ ಈ ಮೇಳ ನಡೆಯಲಿದೆ. ವಿಧಾನಸೌಧದ ಆವರಣದಲ್ಲಿ ಮೊತ್ತ ಮೊದಲ ಬಾರಿಗೆ ಫೆಸ್ಟಿವಲ್ ನಡೆಯಲಿದೆ.
ಬರಹಗಾರರನ್ನು ವಿಧಾನಸೌಧದ ಹತ್ತಿರ ತರುವ ಪ್ರಯತ್ನವಿದು. ವಿಧಾನಸೌಧದ ಸುತ್ತ ೧೫೦ಕ್ಕೂ ಅಧಿಕ ಸ್ಟಾಲ್ಸ್ ಬರಲಿದೆ. ಫೆಸ್ಟಿವಲ್ ನಲ್ಲಿ ೮೦% ಕನ್ನಡ ಪುಸ್ತಕ, ೨೦% ಇತರ ಪುಸ್ತಕಗಳು ಇರಲಿದೆ. ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆಯ ಮೂಲಕ ಬರಹಗಾರರಿಗೆ ಅವಕಾಶವಿರಲಿದೆ. ಸಂಜೆಯಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಸಾರ್ವಜನಿಕರಿಗೆ ಮುಕ್ತ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತದೆ ಎಂದರು.
ಶಾಸಕರ ನಿಧಿಯಿಂದ ೨ರಿಂದ ೫ ಲಕ್ಷದ ಹಣದಿಂದ ಪುಸ್ತಕ ಖರೀದಿಗೆ ಅವಕಾಶವಿದೆ. ಅದನ್ನು ತಮ್ಮ ಕ್ಷೇತ್ರದ ಶಾಲಾ ಕಾಲೇಜುಗಳಿಗೆ ನೀಡಲು ಅವಕಾಶವಿದೆ ಎಂದರು.