ಕಾರಿನ ಸೈಲೆನ್ಸರ್‌ಗೆ ಹುಲ್ಲು ತಗುಲಿ ಬೆಂಕಿ: ಕಾರು ಭಸ್ಮ

0
14

ಕೋಲಾರ: ರಾಗಿ ಒಕ್ಕಣೆ ಮಾಡಲು ಹಾಕಿದ್ದ ರಾಗಿ ತೆನೆಗಳ ಮೇಲೆ ಹೋಗುತ್ತಿದ್ದ ಕಾರಿನ ಸೈಲೆನ್ಸರ್‌ಗೆ ರಾಗಿ ಹುಲ್ಲು ತಗುಲಿ ಅಗ್ನಿಸ್ಪರ್ಶವಾಗಿ ಕಾರು ಸಂಪೂರ್ಣ ಸುಟ್ಟು ಹೋದ ಘಟನೆ ಮುಳಬಾಗಿಲು ತಾಲೂಕಿನ ನಂಗಲಿಯಿಂದ ಹೆಬ್ಬಣಿಗೆ ಹೋಗುವ ರಸ್ತೆಯಲ್ಲಿ ಭಾನುವಾರ ಸಂಜೆ ನಡೆದಿದೆ.
ಕೋಲಾರ ಜಿಲ್ಲೆಯ ಬಹುತೇಕ ಗ್ರಾಮೀಣ ರಸ್ತೆಗಳಲ್ಲಿ ಈ ರೀತಿ ಒಕ್ಕಣ ಮಾಡುತ್ತಾರೆ. ಇದನ್ನು ನಿಷೇಧಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ನರೇಗಾ ಯೋಜನೆ ಅಡಿ ಒಕ್ಕಣೆ ಅಂಗಳ ನಿರ್ಮಿಸಲು ಅನುದಾನ ಲಭ್ಯವಿದ್ದರೂ ಸಹ ಅದರ ಬಳಕೆಗೆ ಜನತೆ ಮುಂದಾಗುತ್ತಿಲ್ಲ ಮತ್ತು ಅಧಿಕಾರಿಗಳು ಸಹ ಅದನ್ನು ಕಡ್ಡಾಯಗೊಳಿಸುತ್ತಿಲ್ಲ ಹಾಗಾಗಿ ಈ ರೀತಿಯ ದುರಂತಗಳು ಪದೇ ಪದೇ ನಡೆಯುತ್ತಿವೆ ಎಂದು ಸಾರ್ವಜನಕರು ಹೇಳುತ್ತಾರೆ.

Previous articleಕ್ಷಿಪ್ರ ಕಾರ್ಯಾಚರಣೆಯ ಅಣುಕು ಪ್ರದರ್ಶನ
Next articleಡಿಸಿ ಸಮಕ್ಷಮ ಶರಣಾದ ನಕ್ಸಲ್ ತೊಂಬಟ್ಟು ಲಕ್ಷ್ಮೀ