ಕರ್ನಾಟಕ ಎರಡನೇ ಹೆಚ್ಚು ಐಟಿ ಕಂಪನಿ ಹೊಂದಿರುವ ರಾಜ್ಯ. ನಾವು 100 ರೂಪಾಯಿ ಟ್ಯಾಕ್ಸ್ ಕಟ್ಟಿದ್ರೆ 12 ರೂಪಾಯಿ ಕೊಡ್ತಾರೆ
ಹುಬ್ಬಳ್ಳಿ: ಕೇಂದ್ರ ಸರ್ಕಾರದ ಬಜೆಟ್ ಬಗ್ಗೆ ನನಗೆ ಯಾವುದೇ ನಿರೀಕ್ಷೆ ಇಲ್ಲ. ನಂಬಿಕೆಯೂ ಇಲ್ಲ ಎಂದು ಗ್ರಾಮೀಣಾಭಿವೃದ್ಶಿ ಮತ್ತು ವಿದ್ಯುನ್ಮಾನ ತಂತ್ರಜ್ಞಾನ ಸಚಿವ ಪ್ರಿಯಾಂಕ ಖರ್ಗೆ ಪ್ರತಿಕ್ರಿಯಿಸಿದರು.
ನಗರದ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ಬೆವರು, ನಮ್ಮ ದುಡಿಮೆ ಅವರಿಗೆ ಬೇಕಂತೆ ನೆರವು ಕೇಳೋದು ತಪ್ಪಾ. ನಮ್ಮಿಂದ ತಾನೇ ದೇಶ ಆರ್ಥಿಕ ಪರಿಸ್ಥಿತಿ ಸುಧಾರಣೆ ಆಗ್ತಾ ಇದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಬಜೆಟ್ ಮೇಲೆ ನಮಗೆ ನಿರೀಕ್ಷೆ ಇಲ್ಲ. ಮೋದಿಯವರ ಮಾಸ್ಟರ್ ಸ್ಟೋಕ್ ನಿಂದ ನಿರುದ್ಯೋಗ ತಾಂಡವ ಆಡ್ತಾ ಇದೆ. ಮಧ್ಯಮ ವರ್ಗದ ಜೀವನ ನಿರ್ವಹಣೆ ಕಷ್ಟವಾಗುತ್ತಿದೆಮ. ರೈತರು ದೆಹಲಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ. ಕೇಂದ್ರ ಯಾವ ರೀತಿ ಸ್ಪಂದಿಸಿದೆ?
ತೆರಿಗೆ ವಿಚಾರಕ್ಕೆ ಬಂದರೆ ಕರ್ನಾಟಕ ಎರಡನೇ ಹೆಚ್ಚು ಐಟಿ ಕಂಪನಿ ಹೊಂದಿರುವ ರಾಜ್ಯ. ನಾವು 100 ರೂಪಾಯಿ ಟ್ಯಾಕ್ಸ್ ಕಟ್ಟಿದ್ರೆ 12 ರೂಪಾಯಿ ಕೊಡ್ತಾರೆ. ಯುಪಿ ಅವರಿಗೆ 120, ಬಿಹಾರ 178 ರೂಪಾಯಿ ಹೋಗ್ತಾ ಇದೆ ಎಂದು ಕೇಂದ್ರದ ತಾರತಮ್ಯ ಧೋರಣೆ ಪ್ರಶ್ನಿಸಿದರು.
ಇಡೀ ಭಾರತ ದೇಶವನ್ನು ನಾವು ಸಮರ್ಥವಾಗಿ ನಡೆಸಿಕೊಂಡು ಹೋಗ್ತಾ ಇದ್ದೇವೆ. ನಮ್ಮ ರಾಜ್ಯದಿಂದಲೇ ಅತೀ ಹೆಚ್ಚು ಉದ್ಯೋಗ ಸೃಷ್ಟಿ ಆಗ್ತಿರೋದು. ಅದಕ್ಕೆ ಯಾವುದೇ ನೆರವು ನೀಡೋದಿಲ್ಲ ಅಂದ್ರೆ ಹೇಗೆ..? ಎಂದು ಪ್ರಶ್ನೆ ಮಾಡಿದರು. ಹೀಗಾಗಿ ಕೇಂದ್ರ ಬಜೆಟ್ ಮೇಲೆ ನನಗೆ ಯಾವುದೇ ನಿರೀಕ್ಷೆ ಇಲ್ಲ ಎಂದು ಸಚಿವ ಖರ್ಗೆ ಹೇಳಿದರು.