ಕುಂಭಮೇಳದಲ್ಲಿ ಕಾಲ್ತುಳಿತ: ಬೆಳಗಾವಿಯ ಭಕ್ತರಿಗೂ ಗಾಯ

0
37

ಇಬ್ಬರು ಮಹಿಳಾ ಬಿಜೆಪಿ ಕಾರ್ಯಕರ್ತರು ಸೇರಿ ನಾಲ್ವರಿಗೆ ಗಾಯ

ಬೆಳಗಾವಿ: ಮಹಾಕುಂಭದಲ್ಲಿ ತಡರಾತ್ರಿ ಸಂಭವಿಸಿದ ಕಾಲ್ತುಳಿತದಲ್ಲಿ ಬೆಳಗಾವಿಯ ಇಬ್ಬರು ಬಿಜೆಪಿ ಕಾರ್ಯಕರ್ತೆಯರು ಸೇರಿದಂತೆ ನಾಲ್ವರಿಗೆ ಗಾಯಗೊಂಡಿದ್ದಾರೆ
ಇಲ್ಲಿನ ವಡಗಾವಿಯ ನಿವಾಸಿ ಸರೋಜಿನಿ ನಡುವಿನಹಳ್ಳಿ ಹಾಗೂ ಕಾಂಚನ್ ಕೋಪಾರ್ಡೆಗೆ ಗಾಯಗೊಂಡ ಬಿಜೆಪಿ ಕಾರ್ಯಕರ್ತೆಯರು. ಅವರೊಂದಿಗೇ ಇದ್ದ ಬಾಲಕಿಯರಾದ ಮೇಘಾ, ಜ್ಯೋತಿ ಅವರಿಗೂ ಗಾಯಗಳಾಗಿವೆ.
ಮೂರು ದಿನಗಳ ಹಿಂದೆ ಎಲ್ಲರೂ ಪ್ರಯಾಗ್‌ರಾಜ್‌ಗೆ ತೆರಳಿದ್ದರು. ಅಲ್ಲಿನ ವೈದ್ಯರಿಂದ ನಾಲ್ವರಿಗೂ ಚಿಕಿತ್ಸೆ ನೀಡಲಾಗಿದೆ. ಎಲ್ಲರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂಬ ಮಾಹಿತಿ ಸಂಬಂಧಿಕರಿಗೆ ಬಂದಿದೆ. ಬೆಳಗಾವಿಯ ಇಬ್ಬರು ಮಹಿಳಾ ಬಿಜೆಪಿ ಕಾರ್ಯಕರ್ತರು ಸೇರಿ ನಾಲ್ವರಿಗೆ ಗಾಯವಾಗಿದೆ.‌ ಬೆಳಗಾವಿ ವಡಗಾವಿಯ ನಿವಾಸಿ ಸರೋಜಿನಿ ನಡುವಿನಹಳ್ಳಿ, ಕಾಂಚನ್ ಕೋಪಾರ್ಡೆ‌ಗೆ ಗಾಯವಾಗಿದೆ. ಬಾಲಕಿಯರಾದ ಮೇಗಾ, ಜ್ಯೋತಿ ಕೂಡ ಕಾಲ್ತುಲಿತದಲ್ಲಿ ಗಾಯವಾಗಿದೆ. ಬೆಳಗಾವಿಯಿಂದ ಸುಮಾರು 500ಕ್ಕೂ ಹೆಚ್ಚು ಯಾತ್ರಾರ್ಥಿಗಳು ಮಹಾ ಕುಂಭದಲ್ಲಿ ಪಾಲ್ಗೊಳ್ಳಲು ತೆರಳಿದ್ದಾರೆ.

Previous articleಮಹಾಕುಂಭದಲ್ಲಿ ಕಾಲ್ತುಳಿತ: ವದಂತಿಗಳಿಗೆ ಕಿವಿಗೊಡದಂತೆ ಸಿಎಂ ಮನವಿ
Next articleಹಿರಿಯ ಪತ್ರಕರ್ತ ಪ್ರಕಾಶ ಜೋಶಿ ನಿಧನ