ಯುವಕನ ಬರ್ಬರ ಹತ್ಯೆ: ಹತ್ಯೆಕೋರರ ಕಾಲಿಗೆ ಗುಂಡೇಟು

ಹುಬ್ಬಳ್ಳಿ : ಇಲ್ಲಿ‌ನ ಲಿಂಗರಾಜನಗರದಲ್ಲಿರುವ ಗೋಲ್ಡನ್ ಹೈಟ್ಸ್ ಬಾರ್ ಆ್ಯಂಡ್ ರೆಸ್ಟೋರೆಂಟ್ ನ ಪಾರ್ಕಿಂಗ್ ಜಾಗದಲ್ಲಿ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಹತ್ಯೆಗೀಡಾದ ಯುವಕ ಆಕಾಶ್ ವಾಲ್ಮಿಕಿ ಎಂಬುವವನಾಗಿದ್ದು, ಇಂದ್ರಪ್ರಸ್ಥನಗರ ನಿವಾಸಿ ಎಂದು ತಿಳಿದಿದೆ. ಹತ್ಯೆಗೆ ಹಳೇ ವೈಷಮ್ಯವೇ ಕಾರಣ ಎಂದು ಹೇಳಲಾಗುತ್ತಿದೆ.
ಕೃತ್ಯ ನಡೆಸಿದ ಆರೋಪಿಗಳ ಪತ್ತೆ ಪೊಲೀಸರು ಜಾಲ ಬೀಸಿದ್ದು, ತಪ್ಪಿಸಿಕೊಳ್ಳಲು ಯತ್ನಿಸಿದ ಮೂವರ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಆರೋಪಿಗಳು ಆನಂದನಗರ ನಿವಾಸಿಗಳು ಎಂದು ತಿಳಿದಿದೆ.
ಘಟನಾ ಸ್ಥಳಕ್ಕೆ ಪೊಲೀಸ್ ಆಯುಕ್ತ ಎನ್ ಶಶಿಕುಮಾರ, ಡಿಸಿಪಿ ಮಹಾನಿಂಗ ನಂದಗಾವಿ, ಎಸಿಪಿ ಶಿವಪ್ರಕಾಶ ನಾಯ್ಜ, ವಿದ್ಯಾನಗರ ಪಿಎಸ್ಐ ಜಯಂತ ಗೌಳಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.