ಮೈಕ್ರೊ ಫೈನಾನ್ಸ್ ಜೊತೆ ಕೈ ಜೋಡಿಸಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಿ

0
23

ಹುಬ್ಬಳ್ಳಿ : ಆರ್ ಬಿಐ ನಾರ್ಮಸ್ ಗಳಿವೆ. ಕಟ್ಟುನಿಟ್ಟಾದ ಕಾಯ್ದೆಗಳಿವೆ. ಅವುಗಳನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು. ಮೈಕ್ರೊ ಫೈನಾನ್ಸ್ ಜೊತೆ ಕೈ ಜೋಡಿಸಿದ ಪೊಲೀಸರ ವಿರುದ್ಧ ಕ್ರಮ ಜರುಗಿಸಲಿ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಒತ್ತಾಯಿಸಿದರು.

ಇಲ್ಲಿನ ಅಶೋಕನಗರದ ಸರಕಾರಿ 13 ನೇ ನಂಬರ್ ಶಾಲೆಯಲ್ಲಿ ಗಣರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಯಾವುದಾದರೂ ಒಂದು ಸಮಸ್ಯೆ ಬಂದರೆ ತುರ್ತು ಸಭೆ ನಡೆಸುವುದು, ಸುಗ್ರೀವಾಜ್ಞೆ ಜಾರಿ ಮಾಡುವಂತಹ ಹೇಳಿಕೆ ನೀಡುವುದು ಮುಖ್ಯಮಂತ್ರಿ ರೂಢಿಸಿಕೊಂಡಿದ್ದಾರೆ. ಈಗಿರುವ ಕಾಯ್ದೆ ಕಾನೂನು ಗಟ್ಟಿಯಾಗಿವೆ. ಅವುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಿ. ದುಡ್ಡು ಕೊಟ್ಟು ವರ್ಗಾವಣೆಗೊಂಡ ಬರುವ ಪೊಲೀಸ್ ಅಧಿಕಾರಿಗೆ ದುಡ್ಡು ಮಾಡುವ ಮಾರ್ಗಗಳಲ್ಲಿ ಮೈಕ್ರೊ ಫೈನಾನ್ಸ್ ಗಳು ಒಂದು. ಮೈಕ್ರೊಫೈನಾನ್ಸ್ ಗಳೇ ಪೊಲೀಸರಿಗೆ ದುಡ್ಡು ಕೊಡಬೇಕು. ಬಡವರ ಪೊಲೀಸರಿಗೆ ದುಡ್ಡು ಕೊಡಲಾಗುತ್ತದೆಯೇ ? ಎಂದು ಪ್ರಶ್ನಿಸಿದರು.

ಮೈಕ್ರೊಫೈನಾನ್ಸ್ ಜೊತೆ ಕೈ ಜೋಡಿಸಿದ ಯಾವ್ಯಾವ ಪೊಲೀಸ ಅಧಿಕಾರಿಗಳು, ಸಿಬ್ಬಂದಿ ಇದ್ದಾರೊ ಅವರ ವಿರುದ್ಧ ತಕ್ಷಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಹುಬ್ಬಳ್ಳಿಯ ಅಶೋಕನಗರದ ಸರಕಾರಿ ಪ್ರಾಥಮಿಕ 13 ನೇ ನಂಬರ್ ಶಾಲೆ ಹಾಗೂ ಶ್ರೀ ವಿದ್ಯಾನಂದ ಶಾಲೆಯಲ್ಲಿ ಗಣರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿದ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅವರು ಶಾಲಾ ಮಕ್ಕಳಿಗೆ ಪೆನ್ನು, ನೋಟ್ ಬುಕ್ ವಿತರಿಸಿದರು.

Previous articleದೇಶದ ಜನತೆಗೆ ಶುಭ ಕೋರಿದ ಪ್ರಧಾನಿ ಮೋದಿ
Next article13 ದಿನಗಳ ಬಳಿಕ ಆಸ್ಪತ್ರೆಯಿಂದ ಬಿಡಗಡೆ: ಭಾವನಾತ್ಮಕ ಪತ್ರ ಬರೆದ ಸಚಿವೆ