ಯೋಜನೆ ಒಂದು ಅಭಿವೃದ್ಧಿಯ ಆಯಾಮ ಹಲವು

ಪೋಷಕರ ಬದುಕು ಗಟ್ಟಿ, ಮಕ್ಕಳ ಭವಿಷ್ಯವೂ ಸುಭದ್ರ

ಬೆಂಗಳೂರು: ನರೇಗಾ ಯೋಜನೆಯಿಂದ ಪೋಷಕರ ಬದುಕು ಗಟ್ಟಿ ಆಗುತ್ತಿದ್ದು ಮಕ್ಕಳ ಭವಿಷ್ಯವೂ ಸುಭದ್ರವಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ನರೇಗಾ ಯೋಜನೆ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು “ಯೋಜನೆ ಒಂದು ಅಭಿವೃದ್ಧಿಯ ಆಯಾಮ ಹಲವು” ಎನ್ನುವುದಕ್ಕೆ ನರೇಗಾ ಯೋಜನೆ ಅತ್ಯುತ್ತಮ ಉದಾಹರಣೆ. ನರೇಗಾ ಯೋಜನೆ ಗ್ರಾಮೀಣ ಕರ್ನಾಟಕದ ಅಭಿವೃದ್ಧಿಯಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದೆ.

ಗ್ರಾಮೀಣ ಸರ್ಕಾರಿ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ನರೇಗಾ ಯೋಜನೆ ಮಹತ್ವದ ಕೊಡುಗೆ ನೀಡಿದೆ.
2023-24 ನೇ ಸಾಲಿನಿಂದ ಈವರೆಗೆ

  • 3610 ಶಾಲೆಗಳ ಕಾಂಪೌಂಡ್ ಗಳನ್ನು ಅಭಿವೃದ್ಧಿಪಡಿಸಲಾಗಿದೆ.
  • 2186 ಸುಸಜ್ಜಿತ ಆಟದ ಮೈದಾನಗಳನ್ನು ನಿರ್ಮಿಸಲಾಗಿದೆ.
  • 658 ಅಡುಗೆ ಕೋಣೆಗಳನ್ನು ನಿರ್ಮಿಸಲಾಗಿದೆ
  • 2780 ಶೌಚಾಲಯಗಳನ್ನು ನಿರ್ಮಿಸಲಾಗಿದೆ

ಶಾಲೆಗಳ ಗುಣಮಟ್ಟ ಹೆಚ್ಚಿಸುತ್ತಿರುವ ನರೇಗಾ ಯೋಜನೆಯಿಂದ ಪೋಷಕರ ಬದುಕು ಗಟ್ಟಿಗೊಳ್ಳುತ್ತಿದೆ, ಅವರ ಮಕ್ಕಳ ಭವಿಷ್ಯವೂ ಸುಭದ್ರವಾಗುತ್ತಿದೆ ಎಂದಿದ್ದಾರೆ.