ಬೆಂಗಳೂರು: ಹಳಿ ನಿರ್ವಹಣಾ ಕಾಮಗಾರಿ ನಿಮಿತ್ತ ಜ. 19ರಂದು ನೇರಳೆ ಮಾರ್ಗದಲ್ಲಿನ ಕೆಂಪೇಗೌಡ ಮೆಜೆಸ್ಟಿಕ್ ಮತ್ತು ಇಂದಿರಾನಗರ ನಡುವೆ ಬೆಳಗ್ಗೆ 7ಗಂಟೆಯಿಂದ 10ಗಂಟೆಯವರೆಗೆ ರೈಲು ಸೇವೆ ಲಭ್ಯವಿರುವುದಿಲ್ಲ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ತಿಳಿಸಿದೆ.
ನೇರಳೆ ಮಾರ್ಗದ ಇತರ ವಿಭಾಗಗಳಲ್ಲಿನ ಮೆಟ್ರೋ ಸೇವೆ ಎಂದಿನಂತೆ ಇರಲಿದೆ. ಹಸಿರು ಮಾರ್ಗದ ರೈಲು ಸಮಯಗಳಲ್ಲಿ ಯಾವುದೇ ಬದಲಾವಣೆಯಿರುವುದಿಲ್ಲ ಮತ್ತು ಎಂದಿನಂತೆ ರೈಲುಗಳ ಸೇವೆ ಇರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ .