ರಮೇಶ್ ವಿರುದ್ಧ ವಿಜಯೇಂದ್ರ ಮೊದಲ ಬಹಿರಂಗ ಕಿಡಿ

0
13

ಕೊಪ್ಪಳ: ಬಿ.ಎಸ್. ಯಡಿಯೂರಪ್ಪ ಬಗ್ಗೆ ಮಾತನಾಡಿದರೆ ರಾಜ್ಯದಲ್ಲಿರುವ ಲಕ್ಷಾಂತರ ಕಾರ್ಯಕರ್ತರ ಮನಸ್ಸಿಗೆ ನೋವಾಗಲಿದೆ. ಇದರಿಂದ ರಮೇಶ ಜಾರಕಿಹೊಳಿ ಓಡಾಡುವುದು ಕಷ್ಟವಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಎಚ್ಚರಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ ಜಾರಕಿಹೊಳಿ ಇತ್ತೀಚೆಗೆ ಪಕ್ಷಕ್ಕೆ ಬಂದವರು. ಅದನ್ನು ಬಿಟ್ಟು ಪತ್ರಿಕೆ ಮುಂದೆ ಮಾತನಾಡಬಾರದು. ನಾನು ಒಂದೂವರೆ ವರ್ಷದಿಂದ ನಿರಂತರ ಹೋರಾಟ ಮಾಡಿದ್ದೇನೆ. ಇದರಿಂದಾಗಿ ಮುಡಾ ನಿವೇಶನವನ್ನು ಸಿಎಂ ಸಿದ್ದರಾಮಯ್ಯ ಮರಳಿ ನೀಡಿದ್ದಾರೆ. ವಾಲ್ಮೀಕಿ ನಿಗಮದ ಹೋರಾಟ ಮಾಡಿದ್ದೇವೆ. ರಾಜ್ಯದ ಮುಖ್ಯಮಂತ್ರಿ ತುದಿಗಾಲ ಮೇಲೆ ನಿಲ್ಲುವಂತೆ ಮಾಡಿದ್ದೇವೆ. ಎಲ್ಲರೂ ಒಂದಾಗುತ್ತಾರೆ. ಇನ್ನೊಂದು ತಿಂಗಳಲ್ಲಿ ಗೊತ್ತಾಗುತ್ತದೆ. ಎಲ್ಲರನ್ನು ಕರೆದುಕೊಂಡು ಹೋಗುವುದು ನನ್ನ ಕರ್ತವ್ಯ ಎಂದರು. ಯಾರ ವೈಫಲ್ಯ ಎಂದು ಅವರ ಕ್ಷೇತ್ರದ ಜನ ಹೇಳುತ್ತಾರೆ ಎಂದ ಅವರು, ವಿಜಯೇಂದ್ರಗೆ ಪ್ರಾಮುಖ್ಯತೆ ನೀಡಿದರೆ ಯಡಿಯೂರಪ್ಪ ಹಾಳಾಗುತ್ತಾರೆ ಎಂದ ಜಾರಕಿಹೊಳಿ ಮಾತಿಗೆ ತಿರುಗೇಟು ನೀಡಿದರು.

Previous articleಕೊಪ್ಪಳದ ಗವಿಮಠ ಜಾತ್ರೆಗೆ ಜನಸಾಗರ
Next articleವಾರದಲ್ಲಿ ೯೦ ಗಂಟೆ ಕೆಲಸ: ಖರ್ಗೆ ವಿರೋಧ