ವಿಜಯಪುರ: ಮಹಿಳೆಯೊಬ್ಬಳು ತನ್ನ ನಾಲ್ವರು ಮಕ್ಕಳೊಂದಿಗೆ ಕಾಲುವೆಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ, ಘಟನೆ ನಡೆದಿದೆ. ಘಟನೆಯಲ್ಲಿ ನಾಲ್ವರು ಮಕ್ಕಳು ಸಾವಿಗೀಡಾಗಿದ್ದು. ಮಹಿಳೆಯನ್ನು ಸ್ಥಳೀಯರು ರಕ್ಷಿಸಿದ್ದಾರೆ.
ಜಿಲ್ಲೆಯ ಆಲಮಟ್ಟಿ ಎಡದಂಡೆ ಮುಖ್ಯ ಕಾಲುವೆಗೆ ಕೊಲ್ಲಾರ ತಾಲೂಕಿನ ತೆಲಗಿ ಗ್ರಾಮದ ಭಾಗ್ಯಶ್ರೀ ನಿಂಗಪ್ಪ ಭಜಂತ್ರಿ (26) ಎಂಬ ಮಹಿಳೆ ತನ್ನ ನಾಲ್ಕು ಮಕ್ಕಳೊಂದಿಗೆ ಕಾಲುವೆಗೆ ಹಾರಿದ್ದಾಳೆ. ಆಗ ಅಲ್ಲೇ ಇದ್ದ ಮೀನುಗಾರರು, ಸಾರ್ವಜನಿಕರು ಇದನ್ನು ಗಮನಿಸಿ ಆಕೆಯನ್ನು ಬದುಕಿಸಿದ್ದಾರೆ, ಆದರೆ, ನಾಲ್ಕು ಮಕ್ಕಳು ನೀರು ಪಾಲಾಗಿದ್ದು, ಇಬ್ಬರು ಮಕ್ಕಳ ಮೃತದೇಹ ಹೊರತೆಗೆಯಲಾಗಿದೆ. ತನು ನಿಂಗರಾಜ ಭಜಂತ್ರಿ (5), ರಕ್ಷಾ ನಿಂಗರಾಜ ಭಜಂತ್ರಿ (3) ಹಾಗೂ ಅವಳಿ ಮಕ್ಕಳಾದ ಹಸೇನ ನಿಂಗರಾಜ ಭಜಂತ್ರಿ, ಹುಸೇನ ನಿಂಗರಾಜ ಭಜಂತ್ರಿ (13 ತಿಂಗಳು) ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ, ನಿಡಗುಂದಿ ಪೊಲೀಸ್‌ರು ಭೇಟಿ ನೀಡಿದ್ದು, ಮಕ್ಕಳ ಪತ್ತೆಗೆ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.