Home Advertisement
Home ತಾಜಾ ಸುದ್ದಿ ವಿಷಯುಕ್ತ ಹಣ್ಣು ಸೇವಿಸಿ ೧೦ ಮಕ್ಕಳು ಅಸ್ವಸ್ಥ

ವಿಷಯುಕ್ತ ಹಣ್ಣು ಸೇವಿಸಿ ೧೦ ಮಕ್ಕಳು ಅಸ್ವಸ್ಥ

0
73

ಧಾರವಾಡ: ಇಲ್ಲಿಯ ಕಲಘಟಗಿ ತಾಲೂಕಿನ ಗಂಭ್ಯಾಪೂರ ಗ್ರಾಮದ ಮಕ್ಕಳು ಆಟವಾಡುತ್ತ ವಿಷಯುಕ್ತ ಹಣ್ಣು ಸೇವಿಸಿ ಅಸ್ವಸ್ಥಗೊಂಡು ಜಿಲ್ಲಾಸ್ಪತ್ರೆಗೆ ದಾಖಲಾದ ಘಟನೆ ರವಿವಾರ ಸಂಭವಿಸಿದೆ.
ಗ್ರಾಮದ ಏಳು ಬಾಲಕರು ಮತ್ತು ಮೂರು ಬಾಲಕಿಯರು ಮುಂಜಾನೆ ಆಟವಾಡುತ್ತ ಔಡಲಕಾಯಿ ತಿಂದಿದ್ದಾರೆ. ತಕ್ಷಣ ಅವರಿಗೆ ವಾಂತಿ-ಬೇಧಿ ಪ್ರಾರಂಭವಾಗಿದೆ.
ತಕ್ಷಣ ವಿಷಯ ತಿಳಿದ ಪಾಲಕರು ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ.‌ ವಿಷಯ ತಿಳಿದ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದರು. ಸದ್ಯ ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿದರು.

Previous articleಹಸುಗಳ ಕೆಚ್ಚಲು ಕತ್ತರಿಸಿರುವ ಅಮಾನೀಯ ಕೃತ್ಯ ಖಂಡನೀಯ
Next articleಮಲಗಿದ್ದ ಹಸುಗಳ ಕೆಚ್ಚಲು ಕೊಯ್ದ ದುರುಳರು