ಛೋಟಾ ರಾಜನ್ ಏಮ್ಸ್‌ಗೆ ದಾಖಲು

0
13

ನವದೆಹಲಿ: ಭೂಗತ ಪಾತಕಿ ಛೋಟಾ ರಾಜನ್ ಅವರನ್ನು ಇಂದು ದೆಹಲಿಯ ಏಮ್ಸ್‌ಗೆ ದಾಖಲಿಸಲಾಗಿದೆ.
ರಾಜನ್‌ಗೆ ಮೂಗಿನ ಆಪರೇಷನ್ ಮಾಡಿಸಬೇಕು ಎಂದು ಜೈಲು ಅಧಿಕಾರಿ ತಿಳಿಸಿದ್ದಾರೆ. 2001ರಲ್ಲಿ ಹೊಟೇಲ್ ಉದ್ಯಮಿಯೊಬ್ಬರ ಕೊಲೆ ಪ್ರಕರಣದಲ್ಲಿ ಛೋಟಾ ರಾಜನ್‌ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಅಂದಿನಿಂದ ಅವರು ತಿಹಾರ್ ಜೈಲಿನಲ್ಲಿದ್ದಾರೆ. ಭೂಗತ ಪಾತಕಿ ಛೋಟಾ ರಾಜನ್‌ ದಾಖಲಾಗಿರುವ ಏಮ್ಸ್‌ ವಾರ್ಡ್‌ನಲ್ಲಿ ದೆಹಲಿ ಪೊಲೀಸರು ಬಿಗಿ ಭದ್ರತೆ ಏರ್ಪಡಿಸಿದ್ದಾರೆ.

Previous articleಮಹಿಳೆಯ ಮೆದುಳು ನಿಷ್ಕ್ರಿಯ: ಅಂಗಾಂಗ ದಾನ ಮಾಡಿ ಸಾರ್ಥಕತೆ
Next articleಬಿಜೆಪಿ ಶಾಸಕನ ಮನೆಯಲ್ಲಿ ಕಾರು ಚಾಲಕನ ಆತ್ಮಹತ್ಯೆ