ನಮ್ಮ ಮೆಟ್ರೋ ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರದವರೆಗೆ ವದಂತಿ
ಬೆಂಗಳೂರು: ಜನವರಿ 6 ರಂದು ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರದವರೆಗೆ ನಮ್ಮ ಮೆಟ್ರೋ ಸೇವೆ ನೀಡಲಿದೆ ಎಂಬ ಮಾಹಿತಿ ಬಗ್ಗೆ ಬೆಂಗಳೂರು ಮೆಟ್ರೋ ರೈಲು ನಿಗಮ ಸಂಸ್ಥೆಯ ಅಧಿಕೃತ ಪ್ರಕಟಣೆ ನೀಡಿದ್ದು, ಪ್ರಕಟಣೆಯಲ್ಲಿ ಜನವರಿ 6, 2025 ರಂದು ಹಳದಿ ಮಾರ್ಗವಾದ ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರದವರೆಗೆ ಸಾರ್ವಜನಿಕರ ಸೇವೆಗೆ ಮೆಟ್ರೋ ರೈಲು ಆರಂಭಗೊಳ್ಳಲಿದೆ ಎಂಬ ಸುದ್ದಿಯು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದು ಸುಳ್ಳು ಮಾಹಿತಿಯಾಗಿದೆ. ನಿಜವಾದ ಸಂಗತಿಯೇನೆಂದರೆ, ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ ಕೋಲ್ಕತ್ತಾದ ಟಿಟಗಾರ್ ರೆೈಲು ಸಂಸ್ಥೆಯ ಕಾರ್ಖಾನೆಯಲ್ಲಿ ಮೊದಲ ರೆೈಲು ಸೆಟ್ ದಿನಾಂಕ 6 ಜನವರಿ 2025 ರಂದು ಅನಾವರಣಗೊಳ್ಳುತ್ತಿದೆ ಎಂದಿದ್ದಾರೆ.