ತುಮಕೂರು: ಕೇಂದ್ರ ಸಚಿವ ಸೋಮಣ್ಣ ಹೆಸರಿನಲ್ಲಿ ವಂಚನೆ ಯತ್ನ ಮಾಡಲಾಗಿದೆ.
ಆರೋಪಿ ಗೋವರ್ಧನ್ ಬಂಧಿಸಿದ ತುಮಕೂರು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಮಿಡಿಗೇಶಿ ಮೂಲದ ಗೋವರ್ಧನ್ ಎಂಬಾತ ನಕಲಿ ಲೆಟರ್ ಹೆಡ್, ಸಹಿ ಹಾಕಿ ವಂಚನೆಗೆ ಪಯತ್ನ ಮಾಡಿದ್ದು ಎನ್ನಲಾಗಿದೆ, ಕೇಂದ್ರ ಸಚಿವ ವಿ.ಸೋಮಣ್ಣ ಅವರ ಆಪ್ತ ಸಹಾಯಕ ನೀಡಿದ ದೂರಿನ ಹಿನ್ನಲೆಯಲ್ಲಿ ತುಮಕೂರು ಪೊಲೀಸರು ಆರೋಪಿ ಗೋವರ್ಧನ್ ಎಂಬಾತನನ್ನು ಬಂಧಿಸಿದ್ದಾರೆ. ಆರೋಪಿ ಗೋವರ್ಧನ್ ಜನರಿಗೆ ಗಂಗಾಕಲ್ಯಾಣ ಯೋಜನೆ ಮಾಡಿಸಿಕೊಡುವುದಾಗಿ ಹೇಳುತ್ತಿದ್ದ. ಇದಕ್ಕಾಗಿ ಕೇಂದ್ರ ಸಚಿವ ವಿ.ಸೋಮಣ್ಣ ಹಾಗೂ ರಾಜ್ಯ ಸರ್ಕಾರ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ಲೆಟರ್ ಹೆಡ್ ಹಾಗೂ ಸಹಿಯನ್ನು ನಕಲಿ ಮಾಡಿ, ವಂಚನೆಗೆ ಯತ್ನಿಸಿದ್ದ.
ಈ ವಿಷಯವ ತಿಳಿದು ಬಂದ ಕಾರಣ, ಸೋಮಣ್ಣ ಆಪ್ತ ಸಹಾಯಕ ದೂರು ನೀಡಿದ್ದರು. ಈ ದೂರಿನ ಹಿನ್ನಲೆಯಲ್ಲಿ ಮಿಡಿಗೇಶಿ ಮೂಲದ ಗೋವರ್ಧನ್ ಬಂಧಿಸಿ, ಜೈಲಿಗಟ್ಟಿದ್ದಾರೆ.