ಕರಾಟೆ-ರಾಷ್ಟ್ರಮಟ್ಟದ ಚಾಂಪಿಯನ್ನಾಗಿ ಹೊರಹೊಮ್ಮಿದ ಲೋಹಿತ ಶಿಂದೆ

0
26

ಹುಬ್ಬಳ್ಳಿಯ ಅಸ್ಪೈರ್ ಸ್ಪೋರ್ಟ್ಸ್ ಕರಾಟೆ ಅಕಾಡೆಮಿಯಿಂದ ಜರುಗಿದ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್‌ಶಿಪ್ ಪಂದ್ಯಾವಳಿಯಲ್ಲಿ 8 ರಾಜ್ಯಗಳ ಸಾವಿರಕ್ಕೂ ಅಧಿಕ ಕುಸ್ತಿಪಟಗಳು ಭಾಗವಹಿಸಿದ್ದರು.

ತಾಲೂಕಿನ ಬನಹಟ್ಟಿಯ ವಿದ್ಯಾರ್ಥಿ ಲೋಹಿತ ಶಿಂದೆ ಕಟಾ ವಿಭಾಗದಿಂದ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ತನ್ನದಾಗಿಸಿಕೊಂಡಿದ್ದಾನೆ.

ಅದರಂತೆ ಶ್ರೇಯಸ್ ಪಾಗಡೆ ದ್ವಿತೀಯ(ಬೆಳ್ಳಿ ಪದಕ), ಅಭಿಲಾಷ ಕೊಣ್ಣೂರ ತೃತಿಯ(ಕಂಚು) ಹೀಗೆ ಮೂವರೂ ರಬಕವಿ-ಬನಹಟ್ಟಿಯವರೇ ಆಗಿದ್ದು ವಿಶೇಷ.

ರಬಕವಿ-ಬನಹಟ್ಟಿ ತಾಲೂಕಿನಿಂದ ತೆರಳಿದ ಕುಸ್ತಿಪಟುಗಳು ಒಟ್ಟಾರೆ ಒಂದು ಚಿನ್ನ, ಮೂರು ಬೆಳ್ಳಿ ಹಾಗು ನಾಲ್ಕು ಕಂಚಿನ ಪದಕ ಪಡೆಯುವದರ ಮೂಲಕ ವಿಶೇಷ ಸಾಧನೆ ಮೆರೆದಿದ್ದಾರೆ.

Previous articleಭಾವೈಕ್ಯತೆ ಬೆಸೆದ ಬುತ್ತಿ ಜಾತ್ರೆ
Next articleಪ್ರಾದೇಶಿಕ ಅಸಮತೋಲನ ತೊಡೆದು ಹಾಕಲು ಶ್ರಮಿಸಬೇಕು