ಭೀಕರ ರಸ್ತೆ ಅಪಘಾತ:‌ ಸ್ಥಳದಲ್ಲಿ ಇಬ್ಬರು ಸಾವು

0
40

ಆನಂದಪುರ: ಸಮೀಪದ ಮುರುಘಾ ಮಠದ ಬಳಿ ಖಾಸಗಿ ಬಸ್ಸು ಹಾಗೂ ಕಾರು ನಡುವೆ ಮುಖಮುಖಿ ಡಿಕ್ಕಿ ಸಂಭವಿಸಿ ಕಾರಿನ ಚಾಲಕ ಸೇರಿ ಇಬ್ಬರು ಸ್ಥಳದಲ್ಲಿ ಸಾವನ್ನಪ್ಪಿದ ಘಟನೆ ಭಾನುವಾರ ಮುಂಜಾನೆ ನಡೆದಿದೆ.
ಸಾಗರದಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ಖಾಸಗಿ ಬಸ್ ಶಿವಮೊಗ್ಗದಿಂದ ಸಾಗರ ಕಡೆಗೆ ಬರುತ್ತಿರುವ ಕಾರು ರಾಷ್ಟ್ರೀಯ ಹೆದ್ದಾರಿ ೨೦೬ರ ಶಿವಮೊಗ್ಗ ರಸ್ತೆಯ ಮುರುಘಾಮಠ ಸಮೀಪ ಮುಖಾಮುಖಿ ಡಿಕ್ಕಿಯಾಗಿವೆ. ಪರಿಣಾಮ ಕಾರಿನಲ್ಲಿದ್ದ ದೊಡ್ಡಬಳ್ಳಾಪುರದ ಶರಣ್(೩೦) ಮತ್ತು ಅಕ್ಷಯ್(೩೨) ಇಬ್ಬರು ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ. ಹೆದ್ದಾರಿ ಬಂದ್ ಆಗಿದ್ದು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.
ಆನಂದಪುರ ಪೊಲೀಸ್ ಠಾಣೆಯ ಪಿಎಸ್‌ಐ ಯುವರಾಜ್ ಕಂಬಳಿ ಹಾಗೂ ಸಿಬ್ಬಂದಿ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿ ರಸ್ತೆಯಿಂದ ವಾಹನವನ್ನು ತೆರ ವುಗೊಳಿಸಿ, ಮೃತ ದೇಹಗಳನ್ನು ಆನಂದಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಾಗಿಸಲಾಯಿತು.

Previous articleಜಿಲೆಟಿನ್ ಸ್ಫೋಟಿಸಿಕೊಂಡು ಯುವಕ ಆತ್ಮಹತ್ಯೆಗೆ ಶರಣು
Next articleಸಚಿನ್ ಪಾಂಚಾಳ್ ಕುಟುಂಬಕ್ಕೆ ೧೦ ಲಕ್ಷ ರೂ. ಪರಿಹಾರ