ಸಂಚಾರಿ ನಿಯಮ ಉಲ್ಲಂಘನೆಗೆ 17,500 ರೂ. ದಂಡ

0
27
ಸಂಚಾರಿ ನಿಯಮ ಉಲ್ಲಂಘನೆ

ಹುಬ್ಬಳ್ಳಿ: ಹಲವಾರು ಬಾರಿ ಸಂಚಾರ ನಿಮಯಮಗಳನ್ನು ಉಲ್ಲಂಘಿಸಿ ದಂಡ ತುಂಬದೇ ರಾಜಾರೋಷವಾಗಿ ಓಡಾಡುತ್ತಿದ್ದ ಬೈಕ್ ಸವಾರನ ಕೈಗೆ ಬರೋಬ್ಬರಿ 17500 ರೂಪಾಯಿ ಬಿಲ್ ನೀಡಿ ಪೊಲೀಸರು ಶಾಕ್ ನೀಡಿದ್ದಾರೆ.
ಅವಳಿನಗರದ ವಿವಿಧೆಡೆಯಲ್ಲಿ ವಾಹನ ತಪಾಸಣೆ ಕೈಗೊಂಡಿರುವ ಸಂಚಾರಿ ಪೊಲೀಸರು ಹೆಲ್ಮೇಟ್ ಇಲ್ಲದೆ ಬೈಕ್ ಸಂಚಾರ ಮಾಡುತ್ತಿದ್ದ ಸವಾರರ ವಾಹನ ತಪಾಸಣೆ ನಡೆಸಿದ್ದಾರೆ. ಈ ವೇಳೆ ದಂಡ ತುಂಬದೇ ಸಂಚಾರ ಮಾಡುತ್ತಿದ್ದ ಬೈಕ್ ಸವಾರನ ವಾಹನದ ಮೇಲೆ ಸಂಚಾರ ನಿಯಮ ಉಲ್ಲಂಘನೆಯ ಮೇಲೆ ಒಟ್ಟು ಪ್ರಕರಣಗಳ ಆಧಾರದ ಮೇಲೆ 17500 ಬಿಲ್ ಕೈಗೆ ನೀಡಿದ್ದಾರೆ. ಉತ್ತರ ಸಂಚಾರಿ ಪೊಲಿಸ್ ಠಾಣೆಯ ಎಎಸ್ಐ ರಮಜಾನಬಿ ಅಳಗವಾಡಿಯವರು ವಿದ್ಯಾನಗರದ ಶಿರೂರ ಪಾರ್ಕ ಹತ್ತಿರ ಗಾಡಿ ತಪಾಸಣೆ ವೇಳೆ ಬೈಕ್ ಸವಾರ ದಂಡ ಪಾವತಿಸದೇ ತಿರುಗಾಡುತ್ತಿರುವುದು ಕಂಡು ಬಂದಿದೆ.
ಬೈಕ್ ಸವಾರನಿಗೆ ಸಂಪೂರ್ಣ ದಂಡ ಭರ್ತಿ ಮಾಡಿದ ನಂತರವೇ ವಾಹನ ಬಿಡುವುದಾಗಿ ಪೊಲೀಸರು ತಿಳಿಸಿದ್ದಾರೆ. ಇದರಿಂದ ವಾಹನ ಸವಾರ ಮಹ್ಮದ ರಫೀಕ ಬೈಕ್ ಬಿಟ್ಟು ಮನೆಗೆ ತೆರಳಿದ್ದಾನೆ.

Previous articleಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರು ಇನ್ನಿಲ್ಲ
Next articleಪಿಎಸ್ಐ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಪ್ರತಿಭಟನೆ