ಮಗು ಹೊತ್ತು ಕನ್ನಡಕ್ಕಾಗಿ ಓಟ…

0
40

ಡಿಸೆಂಬರ್ 20, 21 ಹಾಗೂ 22 ರಂದು 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ

ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ‘ಕನ್ನಡಕ್ಕಾಗಿ ಓಡು’ ಘೋಷಣೆಯೊಂದಿಗೆ ನಡೆದ ಮ್ಯಾರಥಾನ್‌ನಲ್ಲಿ ಅವಿನಾಶ್, ಮರಳಿಗ ಗ್ರಾಮದಿಂದ ಬಂದು ತನ್ನ ಮಗೂವನ್ನು ಹೆಗಲ ಮೇಲೆ ಹೊತ್ತು ಆರು ಕಿಲೋಮೀಟರ್ ಓಡಿ ಗಮನ ಸೆಳೆದರು.
87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸುವ ನಿಟ್ಟಿನಲ್ಲಿ ನಿರ್ಮಾಣವಾಗುತ್ತಿರುವ ವೇದಿಕೆ ಹಾಗೂ ಇತರೆ ಮೂಲಸೌಕರ್ಯವನ್ನು ಸ್ವಾಗತ ಸಮಿತಿಯ ಮಹಾಪೋಷಕರಾದ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರು, ಮಂಡ್ಯ ಜಿಲ್ಲೆ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಅವಧೂತ ವಿನಯ್ ಗುರೂಜಿ, ಶಾಸಕ ಪಿ. ರವಿಕುಮಾರ್ ಗೌಡ (ಗಣಿಗ), ವಿಧಾನಪರಿಷತ್ ಸದಸ್ಯ ಮಧು ಜಿ ಮಾದೇಗೌಡ, ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ. ಮಹೇಶ್ ಜೋಶಿ, ಜಿಲ್ಲಾಧಿಕಾರಿ ಡಾ. ಕುಮಾರ, ಅಪರ ಜಿಲ್ಲಾಧಿಕಾರಿ ಶಿವಾನಂದಮೂರ್ತಿ ಇತರರು ಉಪಸ್ಥಿತರಿದ್ದರು.

Previous articleಚಾರ್ಮಾಡಿ ನದಿಯಲ್ಲಿ ಗೋವುಗಳ ಅವಶೇಷ ಪತ್ತೆ
Next articleಪ್ಯಾಲೆಸ್ತೀನ್ ನಂತರ ಬಾಂಗ್ಲಾದೇಶ ಬ್ಯಾಗ್‌ನೊಂದಿಗೆ ಪ್ರಿಯಾಂಕಾ ಗಾಂಧಿ