ಪಟಾಕಿ ಸಿಡಿದು ವ್ಯಕ್ತಿಸಾವು

0
16

ಹಾವೇರಿ: ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿ ಇಟ್ಟಿದ್ದ ಪಟಾಕಿಗೆ ಬೆಂಕಿ ತಗುಲಿ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಸವಣೂರಿನ ಮಾಲತೇಶ ನಗರದಲ್ಲಿ ನಡೆದಿದೆ.
ಷಣ್ಮುಖಪ್ಪ ದೇವಗಿರಿ(೫೫) ಮೃತಪಟ್ಟ ವ್ಯಕ್ತಿ ಗಣೇಶ ಹಬ್ಬ ಹಾಗೂ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮಾರಾಟ ಮಾಡಿ ಉಳಿದ ಪಟಾಕಿಯನ್ನು ಲೈಸೆನ್ಸ್ ಪಡೆಯದೆ ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿಡಲಾಗಿತ್ತು ಎನ್ನಲಾಗಿದ್ದು, ಪಟಾಕಿ ಸಂಗ್ರಹಿಸಿಟ್ಟುಕೊಂಡ ಜಾಗದಲ್ಲಿ ಮಲಗಿದ್ದ ಷಣ್ಮುಖಪ್ಪಗೆ ಪಟಾಕಿ ಸಿಡಿದು ಬೆಂಕಿಯಲ್ಲಿ ಸುಟ್ಟು ಕರಕಲಾಗಿದ್ದಾನೆ. ಈ ಘಟನೆಯ ಕುರಿತು ಸವಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous articleಗ್ಯಾರಂಟಿಯಿಂದ ಯಾವ ಅಭಿವೃದ್ಧಿ ನಿಂತಿದೆ? ಸಿಎಂ ಸವಾಲು
Next articleಅಭಿವೃದ್ಧಿಯೇ ನಮ್ಮ ತಾಯಿ ತಂದೆ, ಗ್ಯಾರಂಟಿಯೇ ನಮ್ಮ ಬಂಧು ಬಳಗ