ಪಕ್ಷದ ಬಲವರ್ಧನೆ ಹೆಸರಲ್ಲಿ ವಿಜಯೇಂದ್ರ ಬಣದ ಸಭೆ

0
31

ಬೆಣ್ಣೆನಗರಿಗೆ ಧಾವಿಸಿದ ಮಾಜಿ ಸಚಿವರು, ಶಾಸಕರು



ದಾವಣಗೆರೆ: ಪಕ್ಷದ ಬಲವರ್ಧನೆ ಹೆಸರಲ್ಲಿ ಮಾಜಿ ಸಚಿವರು, ಮಾಜಿ ಶಾಸಕರು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ನೇತೃತ್ವದಲ್ಲಿ ಬೆಣ್ಣೆನಗರಿ ದಾವಣಗೆರೆಯಲ್ಲಿ ವಿಜಯೇಂದ್ರ ಪರ ಶಕ್ತಿ ಪ್ರದರ್ಶನಕ್ಕೆ ಭಾನುವಾರ ಸಭೆ ನಡೆಸಲು ಮುಂದಾಗಿದ್ದಾರೆ.
ನಗರದ ಸಾಯಿ ಇಂಟರ್ ನ್ಯಾಷನಲ್ ಹೋಟೆಲ್‌ನಲ್ಲಿ ಶನಿವಾರ ರಾತ್ರಿ ಎಸ್.ವಿ.ರಾಮಚಂದ್ರ, ಸಂಪಗಿ, ಬ್ಯಾಡಗಿ ವಿರುಪಾಕ್ಷಪ್ಪ, ರಾಣೆಬೇನ್ನೂರು ಅರುಣ್‌ಕುಮಾರ್, ಕೊಳ್ಳೆಗಾಲ ಮಹೇಶ್, ಮಾನ್ವಿ ಗಂಗಾಧರ ನಾಯ್ಕ್, ಶಿವಮೊಗ್ಗ ಕುಮಾರಸ್ವಾಮಿ, ಸೀಮಾ ಮಸೂತಿ, ಬಸವರಾಜ್ ನಾಯ್ಕ್, ಮೊಳಕಾಲ್ಮೂರು ತಿಪ್ಪೇಸ್ವಾಮಿ, ಕಡೂರು ಬೆಳ್ಳಿ ಪ್ರಕಾಶ್, ರಾಜಶೇಖರ್ ಶೀಲವಂತ್, ಮಸ್ಕಿ ಪ್ರತಾಪ್‌ಗೌಡ್ರು, ಮೈಸೂರು ನಾಗೇಂದ್ರ, ಗುಂಡ್ಲುಪೇಟೆ ನಿರಂಜನ್, ಜಗದೀಶ್ ಮೆಟ್ ಗುಡ್, ಸುರೇಶ್ ಮಾರಿಹಾಳ್, ವಿಶ್ವನಾಥ್ ಪಟೇಲ್, ಬೆಳಗಾವಿಯ ವಿಶ್ವನಾಥ್ ಪಾಟೀಲ್ ಸೇರಿದಂತೆ ೨೦ಕ್ಕೂ ಹೆಚ್ಚು ಮಾಜಿ ಸಚಿವರು, ಮಾಜಿ ಶಾಸಕರು ಸೇರಿದ್ದಾರೆ. ನಾಳೆ ಬೆಳಗ್ಗೆ ಇನ್ನೂ ಹೆಚ್ಚು ಮಾಜಿ ಸಚಿವರು, ಶಾಸಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ನೇತೃತ್ವ ವಹಿಸಿರುವ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಗಂಡು ಮೆಟ್ಟಿನ ನಾಡು ದಾವಣಗೆರೆಯಲ್ಲಿ ರಾಷ್ಟಿçÃಯ ಪಕ್ಷಗಳಿಗೆ ಜನ್ಮ ನೀಡಿದ ಸ್ಥಳ. ಸಿದ್ದರಾಮೋತ್ಸವ ಇರಬಹುದು, ಮೋದಿ ರ‍್ಯಾಲಿ ಇರಬಹುದು. ಹೀಗೆ ಇಲ್ಲಿ ನಡೆಸಿದ ರ‍್ಯಾಲಿಗಳು, ಸಮಾವೇಶಗಳು ಯಶಸ್ವಿಯಾಗಿವೆ. ಈ ನಿಟ್ಟಿನಲ್ಲಿ ಪಕ್ಷವನ್ನು ಬಲವರ್ಧನೆ ಮಾಡುವ ಉದ್ದೇಶದಿಂದ ಪಕ್ಷದ ಮಾಜಿ ಸಚಿವರು, ಶಾಸಕರು ಇಲ್ಲಿ ಸೇರಿ ಸಭೆ ನಡೆಸಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ಶಕ್ತಿ ತುಂಬಿಸುವ ಹಿನ್ನೆಲೆಯಲ್ಲಿ ಸಭೆ ನಡೆಸುತ್ತಿದ್ದೇವೆ. ಯಾವ ಬಣದ ವಿರುದ್ಧ ಅಲ್ಲ ಎಂದು ಸ್ಪಷ್ಪಡಿಸಿದರು.
ಈ ಹಿಂದೆ ಎರಡು ಬಣದ ನಾಯಕರು ದಾವಣಗೆರೆಯಲ್ಲಿ ಸಮಾವೇಶ ನಡೆಸಿ ಶಕ್ತಿ ಪ್ರದರ್ಶನ ಮಾಡುವುದಾಗಿ ಹೇಳಿಕೆ ನೀಡಿದ್ದರು. ಎರಡು ಬಣಗಳ ಬಡಿದಾಟ ಹೆಚ್ಚಾಗುತ್ತಿದ್ದಂತೆ ಈಚೆಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮತ್ತು ಶಾಸಕ ಯತ್ನಾಳ್ ಅವರನ್ನು ದೆಹಲಿಗೆ ಕರೆಸಿಕೊಂಡ ಹೈಕಮಾಂಡ್ ಇಬ್ಬರಿಗೂ ಸಭೆ, ಸಮಾವೇಶ ಬೇಡ, ಎಲ್ಲರೂ ಒಟ್ಟಿಗೆ ಪಕ್ಷ ಸಂಘಟನೆ ಮಾಡುವಂತೆ ಬುದ್ಧಿವಾದ ಹೇಳಿ ಕಳುಹಿಸಿತ್ತು. ಆದರೆ ದಾವಣಗೆರೆಯಲ್ಲಿ ಎಂ.ಪಿ.ರೇಣುಕಾಚಾರ್ಯ ನೇತೃತ್ವದಲ್ಲಿ ಭಾನುವಾರ ನಡೆಸಲು ಉದ್ದೇಶಿಸಿರುವ ಸಭೆ ನೋಡಿದರೆ ಎರಡು ಬಣಗಳ ನಡುವಿನ ಬಡಿದಾಟ ಇನ್ನು ಇದೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.

Previous article30ನೇ ವರ್ಷದ ಆಳ್ವಾಸ್ ವಿರಾಸತ್ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ತೆರೆ
Next articleಪ್ರಥಮ ವೃತ್ತಿಪರ ಯಕ್ಷಗಾನ ಭಾಗವತ ಖ್ಯಾತಿಯ ಲೀಲಾವತಿ ಬೈಪಡಿತ್ತಾಯ ಇನ್ನಿಲ್ಲ