ಹುಲಿಗಿ(ಕೊಪ್ಪಳ): ಹನುಮಮಾಲಾಧಾರಿಯೊಬ್ಬರು ಕಾಲುವೆಯಲ್ಲಿ ಸ್ನಾತ ಮಾಡುವಾಗ ಕೊಚ್ಚಿಹೋಗಿದ್ದು, ನಿರಂತರ ಕಾರ್ಯಾಚರಣೆಯಿಂದಾಗಿ ತಾಲ್ಲೂಕಿನ ಅಗಳಕೇರಾ ಗ್ರಾಮದ ಕಾಲುವೆ ಬಳಿ ಶುಕ್ರವಾರ ಸಂಜೆ ಯುವಕನ ಶವ ಪತ್ತೆ ಮಾಡಲಾಯಿತು.
ತಾಲ್ಲೂಕಿನ ಅಗಳಕೇರಾ ಗ್ರಾಮದ ಯಮನೂರಪ್ಪ ಚಿಲಕಮುಖಿ(೧೮) ಬುಧವಾರ ಸಂಜೆ ಸ್ನಾನ ಮಾಡಲು ಇಬ್ಬರು ಸ್ನೇಹಿತರ ಜತೆ ಕಾಲುವೆಗೆ ತೆರಳಿದ್ದನು. ಯುವಕ ಯಮನೂರಪ್ಪ ಕೊಚ್ಚಿ ಹೋಗಿದ್ದು, ಇನ್ನಿಬ್ಬರನ್ನು ದಾರಿಯಲ್ಲಿ ಹೋಗುತ್ತಿದ್ದವರು ರಕ್ಷಣೆ ಮಾಡಿದ್ದರು. ಕೊಚ್ಚಿ ಹೋಗಿದ್ದ ಯುವಕನ ಪತ್ತೆಗೆ ಅಗ್ನಿಶಾಮಕ ದಳದ ಸಿಬ್ಬಂದಿ ಎರಡು ದಿನಗಳ ಕಾಲ ಕಾರ್ಯಾಚರಣೆ ನಡೆಸುತ್ತಿದ್ದರು.
ಕೊನೆಗೆ ಶುಕ್ರವಾರ ಸಂಜೆ ಯುವಕನ ಶವ ಪತ್ತೆ ಮಾಡಲಾಯಿತು. ಸುಮಾರು ೨೪ ಗಂಟೆಗಳ ಕಾಲ ಅಗ್ನಿಶಾಮಕ ದಳದ ಸಿಬ್ಬಂದಿಗಳ ನಿರಂತರ ಕಾರ್ಯಾಚರಣೆಯಿಂದ ಶುಕ್ರವಾರ ಸಂಜೆ ಶವ ಪತ್ತೆಯಾಗಿದೆ. ಈ ಕುರಿತು ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.