ಆಹ್ವಾನ ನೀಡಿದವರೇ ಸಿದ್ದರಾಮಯ್ಯರನ್ನ ಸೋಲಿಸುತ್ತಾರೆ: ವರ್ತೂರು ಪ್ರಕಾಶ

0
36

ಕೋಲಾರ: ಕೋಲಾರದಲ್ಲಿನ ಕಾಳೆಲೆಯುವ ಕಾಂಗ್ರೆಸ್ಸಿಗರನ್ನು ನಂಬಿ ನಮ್ಮ ಸಮುದಾಯದ ಮುಖಂಡ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೋಸ ಹೋಗಬಾರದು ಎಂದು ವರ್ತೂರು ಪ್ರಕಾಶ್ ಸಲಹೆ ನೀಡಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯರನ್ನು ಕೋಲಾರಕ್ಕೆ ಬನ್ನಿ ಎಂದು ಆಹ್ವಾನ ನೀಡಿದ್ದರು. ಆದರೆ ಘಟನಬಂದನ್ ನೂರೆಂಟು ಭಾಗಗಳಿವೆ ಎಂಬುದು ಸಿದ್ದರಾಮಯ್ಯ ಕೋಲಾರಕ್ಕೆ ಬಂದ ಮೇಲೆ ಅರಿವಾಗಿದೆ. ಅವರೇ ಬರಲಿ ಎಂದು ಗುಂಪು ಹೋಗಿ ಆಹ್ವಾನ ನೀಡಿದ್ದವರೆ, ಹಿಂಬಾಲಿಗಿನಿಂದ ಕಾಂಗ್ರೆಸ್ ಟಿಕೆಟ್‌ಗೆ ಅರ್ಜಿ ಸಲ್ಲಿಸುತ್ತಿದ್ದಾರೆ ಎಂದು ಟೀಕಿಸಿದರು.
ಮಾಜಿ ಸ್ಪೀಕರ್ ರಮೇಶ್ ಕುಮಾರ್ ಶಿಷ್ಯರಾದ ಬ್ಯಾಲಹಳ್ಳಿ ಗೋವಿಂದೇಗೌಡರಿಂದ ಅರ್ಜಿ ಹಾಕಿಸಿ, ಸಿದ್ದರಾಮಯರಿಗೆ ಆಹ್ವಾನ ನೀಡುತಿರುವುದು ನಾಚಿಕೆಗೇಡಿನ ಸಂಗತಿ, ಅಲ್ಲದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅಭಿಮಾನಿ ಶ್ರೀನಿವಾಸ್, ಮಾಜಿ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಕಟ್ಟಾಭಿಮಾನಿಗಳಾದ ಶ್ರೀನಿವಾಸ್, ಎಲ್ಲೆ ಮಂಜುನಾಥ್ ಸೇರಿದಂತೆ ಕಾಂಗ್ರೆಸ್ ೭-೮ ಜನ ಅರ್ಜಿ ಹಾಕಿದ್ದಾರೆ ಎಂದು ಹೇಳಿದರು.
ಒಂದು ವೇಳೆ ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧಿಸಿದರೆ, ಅರ್ಜಿ ಹಾಕಿರುವ ೭-೮ ಜನರೇ ಅವರನ್ನು ಸೋಲಿಸಲಿದ್ದಾರೆ. ಆದ್ದರಿಂದ ಇಂತಹವರನ್ನು ನಂಬಿ ಸಿದ್ದರಾಮಯ್ಯ ಮೋಸ ಹೋಗಿ ಸಮುದಾಯಕ್ಕೆ ಆಗುವ ಅವಮಾನದಿಂದ ತಪ್ಪಿಸಿಕೊಳ್ಳಬೇಕೆಂದು ನುಡಿದರು.

Previous articleರಾಜ್ಯದ ಗಡಿ ರಕ್ಷಣೆಗೆ ನಾವು ಸಶಕ್ತರಾಗಿದ್ದೇವೆ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
Next articleಮಂಗಳೂರು ಬ್ಲಾಸ್ಟ್‌ನ ಆರೋಪಿ ಸಿಮ್‌ಗೆ ಸಂಡೂರು ವಿಳಾಸ!