ಕಳುವಾದ 24 ಗಂಟೆಯಲ್ಲಿ ಕಾರು ಪತ್ತೆ

0
35

ದಾವಣಗೆರೆ: ಇಲ್ಲಿನ ಬಾಲಾಜಿ ಬಡಾವಣೆಯ ಸೆಲ್ಲರ್ ಹತ್ತಿರ ನಿಲ್ಲಿಸಿದ್ದ ಕಾರನ್ನು ಕಳ್ಳತನ ಮಾಡಿದ್ದ 24 ಗಂಟೆಯಲ್ಲಿಯೇ ವಿದ್ಯಾನಗರ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ, ಸುಮಾರು 10 ಲಕ್ಷ ಬೆಲೆಯ ಕಾರನ್ನು ವಶಕ್ಕೆ ಪಡೆದಿದ್ದಾರೆ.

ಹಣ್ಣಿನ ವ್ಯಾಪಾರಿ ಹೆಚ್.ಎಸ್. ಚಂದನ್ ಶುಕ್ರವಾರ ಬೆಳಿಗ್ಗೆ ಹಣ್ಣನ್ನು ಕಾರಿನಲ್ಲಿ ಹಾಕಿಕೊಳ್ಳಲು ಸೆಲ್ಲರ್ ಬಳಿ ಕಾರು ನಿಲ್ಲಿಸಿದ್ದರು. ಬೈಕಿನಲ್ಲಿ ಬಂದ ಇಬ್ಬರು ವ್ಯಕ್ತಿಗಳಲ್ಲಿ ಓರ್ವ ಕಾರನ್ನು ಕಳ್ಳತನ ಮಾಡಿ ತೆಗೆದುಕೊಂಡು ಹೋಗಿದ್ದ ಈ ಬಗ್ಗೆ ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಸದರಿ ಆರೋಪಿತನಾದ ಪತೇಹ್ ಅಹಮದ್ @ ಪತ್ತೆ ಪೈಲ್ವಾನ್ ಈತನು ಕಾರನ್ನು ಕದ್ದು ಹರಿಹರ ನಗರದ ಕೋಟೆ ಆಂಜನೇಯ ದೇವಾಸ್ಥಾನದ ಬಳಿಯಿರುವ ಚರ್ಚ್ ರಸ್ತೆಯಲ್ಲಿ ಬೈಕ್‌ಗೆ ಅಪಘಾತ ಪಡಿಸಿದಾಗ ಈ ಸಂಬAಧ ಹರಿಹರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದರಿಂದ ಆರೋಪಿ ಪತ್ತೆಗೆ ಪೊಲೀಸರಿಗೆ ಅನುಕೂಲವಾಗಿತ್ತು. ಆರೋಪಿತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಮತ್ತೋರ್ವ ಆರೋಪಿಗೆ ಪೊಲೀಸರು ಜಾಲ ಬೀಸಿದ್ದಾರೆ.

ಪತ್ತೆ ಕಾರ್ಯದಲ್ಲಿ ಸಿಬ್ಬಂದಿಗಳಾದ ಶಂಕರ್ ಜಾಧವ್, ಆನಂದ ಎಮ್, ಬೋಜಪ್ಪ, ಚಂದ್ರಪ್ಪ, ಗೋಪಿನಾಥ ನಾಯ್ಕ, ಬಸವರಾಜ್, ಅಮೃತ್ ಕೆ ಹೆಚ್, ನವೀನ್ ಮಲ್ಲನಗೌಡ, ಮಾರಪ್ಪ ಮತ್ತು ಕೊಟ್ರೇಶ ಹಾಗು ಸ್ಮಾರ್ಟ ಸಿಟಿ ಕಚೇರಿಯ ಸಿಬ್ಬಂದಿಗಳಾದ ಮಾರುತಿ, ಸೋಮು ಹಾಗು ರಾಘವೇಂದ್ರ ಯಶಸ್ವಿಯಾಗಿದ್ದಾರೆ.

Previous articleಬೇನಾಮಿ ಆಸ್ತಿ ಪ್ರಕರಣ: ಕ್ಲೀನ್‌ ಚಿಟ್‌ ಪಡೆದ ಅಜಿತ್‌ ಪವಾರ್‌
Next articleಕುಕ್ಕೆ: ಚಂಪಾಷಷ್ಠಿ ಮಹಾರಥೋತ್ಸವ