ಯಲ್ಲಮ್ಮನ ಗುಡ್ಡದ ಅಭಿವೃದ್ಧಿಗಾಗಿ‌ 100 ಕೋಟಿ ಅನುದಾನ

0
124

ನಮ್ಮ ನಾಯಕರನ್ನು ತೇಜೋವಧೆ ಮಾಡುವ ಪ್ರಯತ್ನ ಮಾಡಿದರೆ ನಾವು ಒಗ್ಗಟ್ಟಾಗಿ ಎದುರಿಸುತ್ತೇವೆ.

ಹುಬ್ಬಳ್ಳಿ: ಯಲ್ಲಮ್ಮನ ದೇವಾಲಯದ ಅಭಿವೃದ್ದಿಗೆ ಕೇಂದ್ರ ಸರ್ಕಾರ 100 ಕೋಟಿ ಅನುದಾನ ನೀಡಿದೆ ಎಂದು ಕಾನೂನು ಸಚಿವ ಹೆಚ್​.ಕೆ ಪಾಟೀಲ್​ ತಿಳಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು ಸವದತ್ತಿ ಯಲ್ಲಮ್ಮನ ಗುಡ್ಡದ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರದಿಂದ ಭರ್ಜರಿ ಗಿಫ್ಟ್ ನೀಡಿದ್ದು, ಕಳೆದ ಒಂದು ವರ್ಷದಿಂದ ನಮ್ಮ ರಾಜ್ಯ ಸರ್ಕಾರ ಮಾಡಿದ ಮನವಿಗೆ ಕೇಂದ್ರ ಸರ್ಕಾರ‌ ಸ್ಪಂದನೆ ಮಾಡಿದೆ. ಕೇಂದ್ರ ಸರ್ಕಾರ ಯಲ್ಲಮ್ಮನ ಗುಡ್ಡದ ಅಭಿವೃದ್ಧಿಗಾಗಿ‌ 100 ಕೋಟಿ ಅನುದಾನ ಮಂಜೂರು ಮಾಡಿದ್ದಾರೆ. ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಯೋಜನಾ ಪ್ಲಾನ್ ಮಾಡಲು ತಿಳಿಸಿದ್ದೆನೆ. ಮೂರು ಸಾವಿರ ಭಕ್ತರಿಗೆ ಏಕಕಾಲದಲ್ಲಿ ಪ್ರಸಾದ ವ್ಯವಸ್ಥೆ ಮಾಡುವ ನಿಟ್ಟಿನಲ್ಲಿ ಕಟ್ಟಡದ‌ ಶಂಕುಸ್ಥಾಪನೆ ಆದಷ್ಟು ಬೇಗ ಆಗಲಿದೆ, ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಪರವಾಗಿ ಧನ್ಯವಾದಗಳನ್ನು ತಿಳಿಸುವೆ ಎಂದರು. ಇನ್ನೂ ಹಾಸನ ಸ್ವಾಭಿಮಾನಿ ಸಮಾವೇಶಕ್ಕೆ ಪತ್ರ ಬರೆದ ವಿಚಾರವಾಗಿ ಮಾತನಾಡಿ, ಯಾರೋ ಸೃಷ್ಟಿ ಮಾಡ್ತಾ ಇದ್ದಾರೆ. ಅನಾಮಧೇಯ ಪತ್ರದ ಒಕ್ಕಲಿಕೆ ನಾವು ಒಪ್ಪುವುದಿಲ್ಲ. ಕಾಂಗ್ರೆಸ್ ಪಕ್ಷ ಮುಂದಾಳತ್ವವಹಿಸಿಕೊಂಡು ಯಶಸ್ವಿ ಮಾಡುತ್ತೇವೆ. ನಮ್ಮ ನಾಯಕರನ್ನು ತೇಜೋವಧೆ ಮಾಡುವ ಪ್ರಯತ್ನ ಮಾಡಿದರೆ ನಾವು ಒಗ್ಗಟ್ಟಾಗಿ ಎದುರಿಸುತ್ತೇವೆ. ನಮ್ಮ ಸರ್ಕಾರ ಅಭದ್ರಗೊಳಿಸುವ ಕೆಲಸ ಮಾಡಿದರೆ ಒಗ್ಗಟ್ಟಾಗಿ ಎದುರಿಸ್ತೇವೆ ಎಂದರು.

Previous articleಕ್ರಿಕೆಟ್ ಬೆಟ್ಟಿಂಗ್ ಜಾಗೃತಿಗೆ RCB in ಪೊಲೀಸ್‌ ಇಲಾಖೆ ಟೀಮ್‌ ಎಂಟ್ರಿ
Next articleಕಾಡಾನೆ ದಾಳಿಯಿಂದ ಸೀತೂರು ಗ್ರಾಮದ ವ್ಯಕ್ತಿಸಾವು