ಗದಗ(ಶಿರಹಟ್ಟಿ): ಇಲ್ಲಿನ ಮಾಗಡಿ ಕೆರೆಗೆ ಈ ಬಾರಿ ಪರ್ವತ ಹೆಬ್ಬಾತುಗಳ ಜೊತೆಗೆ ಮೂರು ಗ್ರೇಲಾಗ್ ಹೆಬ್ಬಾತು ಬಂದಿದೆ.
ವನ್ಯಜೀವಿ ಛಾಯಾಗ್ರಾಹಕ ಸಂಗಮೇಶ ಕಡಗದ ಇದನ್ನು ದಾಖಲಿಸಿದ್ದಾರೆ. ಕಳೆದ ವರ್ಷ ಕೇವಲ ಒಂದು ಗ್ರೇಲಾಗ್ ಹೆಬ್ಬಾತು ಮಾತ್ರ ವಲಸೆ ಬಂದಿತ್ತು. ಗ್ರೇಲಾಗ್ ಹೆಬ್ಬಾತು ಜಲಪಕ್ಷಿ ಅನಾಟಿಡೆ ಕುಟುಂಬಕ್ಕೆ ಸೇರಿದ ಅನ್ಸರ್ ಕುಲದಲ್ಲಿ ದೊಡ್ಡ ಹೆಬ್ಬಾತು ಜಾತಿಯಾಗಿದೆ. ೨೯-೩೬ ಇಂಚು ಗಾತ್ರವಿರುವ ಇದು ಬೂದು ಮತ್ತು ಬಿಳಿ ಪುಕ್ಕಗಳು ಮತ್ತು ಕಿತ್ತಳೆ, ತಿಳಿಗುಲಾಬಿ ಬಣ್ಣದ ಕೊಕ್ಕು ಮತ್ತು ಗುಲಾಬಿ ಕಾಲುಗಳಿಂದ ಕೂಡಿದೆ. ಸರಾಸರಿ ೩.೩ ಕಿಲೋ ಗ್ರಾಂಗಳಷ್ಟು ತೂಕ ಹೊಂದಿದ್ದು, ಯುರೋಪಿನಿಂದ ಬೆಚ್ಚಗಿನ ಸ್ಥಳಗಳಲ್ಲಿ ಚಳಿಗಾಲ ಕಳೆಯಲು ಏಷ್ಯಾಕ್ಕೆ ವಲಸೆ ಬರುತ್ತವೆ.