ರವೀಂದ್ರನಾಥ್ ಸ್ಪರ್ಧೆಗೆ ಒಪ್ಪದಿದ್ರೆ, ಗೆಲ್ಲುವ ಅಭ್ಯರ್ಥಿ ಕಣಕ್ಕಿಳಿಸುತ್ತೇವೆ: ಸಿದ್ದೇಶ್ವರ್

0
14
S A RAVINDRNATH

ದಾವಣಗೆರೆ: ದಾವಣಗೆರೆ ಉತ್ತರ ಕ್ಷೇತ್ರದಲ್ಲಿ ಹಾಲಿ ಶಾಸಕ ಎಸ್.ಎ.ರವೀಂದ್ರನಾಥ್ ಈ ಬಾರಿ ಸ್ಪರ್ಧಿಸಲು ಒಪ್ಪದಿದ್ದರೆ ಒಳ್ಳೆಯ ಬೇರೊಬ್ಬ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತೇವೆ. ಮುಂಬರುವ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲಾ ೮ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಿಸುವ ಗುರಿ ನಮ್ಮದು ಎಂದು ಸಂಸದ, ಮಾಜಿ ಕೇಂದ್ರ ಸಚಿವ ಡಾ.ಜಿ.ಎಂ.ಸಿದ್ದೇಶ್ವರ ಹೇಳಿದರು.
ಜಿಲ್ಲೆಯ ಸಂತೇಬೆನ್ನೂರು ಗ್ರಾಮದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷ ಸೂಚಿಸಿದರೆ ರಾಜ್ಯ ರಾಜಕಾರಣಕ್ಕೆ ಬರಲು ಸಿದ್ಧ. ಪಕ್ಷ ಏನೇ ತೀರ್ಮಾನ ಕೈಗೊಂಡರೂ ಅದಕ್ಕೆ ಬದ್ಧವಾಗಿರುತ್ತೇನೆ. ಪಕ್ಷದ ಹೈಕಮಾಂಡ್ ರಾಜ್ಯಕ್ಕೆ ಬರಲು ಹೇಳಿದರೆ ಬರುತ್ತೇನೆ, ಗ್ರಾಮಕ್ಕೆ ಹೋಗಲು ಹೇಳಿದರೂ ಹೋಗುತ್ತೇನೆ. ವರಿಷ್ಠರ ನಿರ್ಧಾರವೇ ಅಂತಿಮ ಎಂದರು.

Previous articleಪಂಚರತ್ನ ರಥಯಾತ್ರೆ ಜನಪರ ಕಾಳಜಿ ಇರುವ ಯಾತ್ರೆ: ಕುಮಾರ ಸ್ವಾಮಿ
Next articleಕೈ ಮುಗಿತೇವಿರಿ ಸಾಹೇಬ್ರ ನಮ್ಮನ್ನ ಕೈ ಬಿಡಬೇಡಿ… ಸಿದ್ದುಗೆ ಮನವಿ ಬಾದಾಮಿ ಕ್ಷೇತ್ರದ ಜನತೆ…