Home Advertisement
Home ತಾಜಾ ಸುದ್ದಿ ಜಾನುವಾರು ಕಳವು ಯತ್ನ: ಇಬ್ಬರು ಪೊಲೀಸರ ವಶಕ್ಕೆ

ಜಾನುವಾರು ಕಳವು ಯತ್ನ: ಇಬ್ಬರು ಪೊಲೀಸರ ವಶಕ್ಕೆ

0
92

ಮೂಡುಬಿದಿರೆ: ತಾಲೂಕಿನ ನೆಲ್ಲಿಕಾರಿನ ಬೋರುಗುಡ್ಡೆ ಎಂಬಲ್ಲಿ ಮನೆಯೊಂದರ ಹಟ್ಟಿಯಿಂದ ಜಾನುವಾರುಗಳ ಕಳ್ಳತನಕ್ಕೆ ಯತ್ನಿಸುತ್ತಿದ್ದ ತಂಡದ ಇಬ್ಬರನ್ನು ಮೂಡುಬಿದಿರೆ ಪೊಲೀಸ್‌ ವೃತ್ತ ನಿರೀಕ್ಷಕ ಸಂದೇಶ ಪಿ.ಜಿ ನೇತೃತ್ವದ ಪೊಲೀಸರ ತಂಡವು ಬಂಧಿಸಿದೆ.
ಪುರಸಭಾ ವ್ಯಾಪ್ತಿಯ ಗಂಟಾಲ್ ಕಟ್ಟೆ ನಿವಾಸಿಗಳಾದ ಮಹಮ್ಮದ್ ಸಫಾನ್ ಮತ್ತು ಸಲೀಂ ಬಂಧಿತ ಆರೋಪಿಗಳು. ನ. 22ರ ನಸುಕಿನ ಜಾವ 2.15ರ ವೇಳೆಗೆ ಮೂಡುಬಿದಿರೆಯ ನೆಲ್ಲಿಕಾರಿನ ಬೋರುಗುಡ್ಡೆ ಎಂಬಲ್ಲಿ ಪಂಜ ಮನೆಯ ಹಟ್ಟಿಯ ಬಳಿ ಬಿಳಿ ಕಾರೊಂದು ನಿಲ್ಲಿಸಲಾಗಿತ್ತು. ಕಾರಿನ ಶಬ್ದ ಕೇಳಿ ಮನೆ ಮಂದಿ ಹೊರಬಂದಾಗ ಕಾರು ಚಾಲನೆಯ ಸ್ಥಿತಿಯಲ್ಲಿ ಕಂಡು ಬಂತು. ಆ ದೃಶ್ಯಾವಳಿ ಕಂಡು ಮನೆಮಂದಿ ಬೊಬ್ಬೆ ಹಾಕಿದಾಗ ಕಾರು ಅಲ್ಲಿಂದ ಹೊರಟು ಹೋಗಿತ್ತು. ನೆರೆಕರೆಯವರು ಸೇರಿಕೊಂಡು ದುಷ್ಕರ್ಮಿಗಳು ಬಂದಿದ್ದ ಕಾರನ್ನು ಹಿಂಬಾಲಿಸಿ ಹೋದಾಗ ಆ ಕಾರಿನ ಚಾಲಕನ ನಿರ್ಲಕ್ಷ್ಯದಿಂದಾಗಿ ಮರವೊಂದಕ್ಕೆ ಡಿಕ್ಕಿ ಹೊಡೆದಿತ್ತು. ದುಷ್ಕರ್ಮಿಗಳು ಪರಾರಿಯಾಗಿದ್ದರು. ದುಷ್ಕರ್ಮಿಗಳು ಬಂದಿದ್ದ ಕಾರಿನ(KA- 20-Z-2879) ಮಾಹಿತಿಯನ್ವಯ ಆರೋಪಿಗಳ ಪತ್ತೆ ಹಚ್ಚಲು ಪೊಲೀಸರಿಗೆ ಸಹಕಾರಿಯಾಗಿದೆ. ದನ ಕಳವುಗೈಯಲು ವಿಫಲಯತ್ನ ನಡೆಸಿರುವುದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದು, ಈ ಹಿಂದೆ ಇದೇ ದಂಧೆ ನಡೆಸಿರುವ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಈ ಕುರಿತು ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous articleನಿಖಿಲ್‌ಗೆ ಸೋಲು: ವಿಷ ಸೇವಿಸಿದ ಅಭಿಮಾನಿ
Next articleಬಿಳೆಮಲೆ ಆರ್‌ಎಸ್ಎಸ್ ಬಗ್ಗೆ ಮಾತನಾಡಿದ್ದಕ್ಕೆ ಆಕ್ಷೇಪ