ಪೊಲೀಸ್ ಬಲೆಗೆ ಬಿದ್ದ ಬುಲೆಟ್ ಖದೀಮರು

0
19
ಬುಲೆಟ್

ಹುಬ್ಬಳ್ಳಿ: ನಗರದಲ್ಲಿ ಬುಲೆಟ್ ಬೈಕ್‌ಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ಇಬ್ಬರು ಖದೀಮರನ್ನು ಬೆಂಡಿಗೇರಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ವೀರಾಪುರ ಓಣಿಯ ಶಶಿಧರ ಹಾಗೂ ಗಿರೀಶ ಎಂಬುವರನ್ನು ಬಂಧಿಸಲಾಗಿದೆ. ಕೆಲವು ದಿನಗಳ ಹಿಂದೆ ಪಗಡಿ ಗಲ್ಲಿಯಲ್ಲಿ ಮುಸ್ತಾಫ್ ಮುಲ್ಲಾ ಎಂಬವರಿಗೆ ಸೇರಿದ ಬುಲೆಟ್ ಬೈಕ್ ಕಳ್ಳತನ ಮಾಡಿದ್ದಲ್ಲದೆ, ಅದೇ ಬೈಕಿನಲ್ಲಿ ಶಿರಸಿ, ಮುಂಡಗೋಡ ಸೇರಿದಂತೆ ಇನ್ನುಳಿದ ಪ್ರವಾಸಿ ಸ್ಥಳಗಳಿಗೆ ತೆರಳಿ ಮೋಜು ಮಸ್ತಿ ಮಾಡುತ್ತಿದ್ದರು.
ಆರೋಪಿಗಳ ಬಗ್ಗೆ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಬೆಂಡಿಗೇರಿ ಠಾಣೆಯ ಪೊಲೀಸರು ಆರೋಪಿಗಳನ್ನು ಬುಲೆಟ್ ಸಮೇತ ಬಂಧನ ಮಾಡಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ ಕುರಿತು ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬುಲೆಟ್
Previous articleಖಾದಿ ರಾಷ್ಟ್ರಧ್ವಜ ದಾಖಲೆ ಮಾರಾಟ, ೩.೫ ಕೋಟಿ ರೂ. ವಹಿವಾಟು..!
Next articleಕೆಸುವಿನ ಸೊಪ್ಪಿನ ಪತ್ರೊಡೆ