ಸಭೆಗಳು ಕೇವಲ ಕಾಟಾಚಾರವಲ್ಲದೆ ಮತ್ತೇನಾಗಲು ಸಾಧ್ಯ?

0
27
ಆರ್‌. ಅಶೋಕ

ಬೆಂಗಳೂರು: ಕಾಟಾಚಾರದ ಸರ್ಕಾರದಲ್ಲಿ ಎಲ್ಲವೂ ಕಾಟಾಚಾರವೇ! ಎಂದು ವಿಪಕ್ಷ ನಾಯಕ ಆರ್‌. ಅಶೋಕ್‌ ಹೇಳಿದ್ದಾರೆ.
ಸರ್ಕಾರ ಇ ಖಾತಾ ಮಾಡುವ ಮುನ್ನ ಮಾಹಿತಿ ಪಡೆಯಬೇಕಿತ್ತು. ಇದಕ್ಕೆ ಬೇಕಾದ ದಾಖಲೆ ಯಾವುದು, ಯಾವ ವಿಭಾಗದಲ್ಲಿ ಎಷ್ಟು ಮಾಡಬಹುದು ಎಂದು ಆಲೋಚಿಸಬೇಕಿತ್ತು. ಏಕಾಏಕಿ ಇ ಖಾತಾ ಮಾಡಿರುವುದರಿಂದ ಜನರಿಗೆ ತೊಂದರೆಯಾಗಿದೆ. ಈಗಾಗಲೇ ಅಪ್‌ಲೋಡ್‌ ಮಾಡಿರುವ ಇ ಖಾತಾಗಳಲ್ಲಿ ಮಾಲೀಕರ ಹೆಸರು, ಭೂಮಿಯ ಅಳತೆಯಲ್ಲಿ ತಪ್ಪಾಗಿದೆ. ಆಸ್ತಿ ವಿವರ ಸರಿಯಾಗಿ ಸಿಗುತ್ತಿಲ್ಲ. ಎನ್‌ಆರ್‌ಐ ಮಾಲೀಕತ್ವದ ಆಸ್ತಿಗೆ ಅಫಿಡವಿಟ್‌ ಮಾಡಬೇಕಿದೆ. ಈ ಯಾವ ಕೆಲಸಗಳೂ ಆಗಿಲ್ಲ ಎಂದರು. ಈ ಕುರಿತಂತೆ ಸಾಮಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ಭ್ರಷ್ಟಾಚಾರ, ಚುನಾವಣಾ ಪ್ರಚಾರ, ಹೈಕಮಾಂಡ್ ನಾಯಕರಿಗೆ ಸಂಪನ್ಮೂಲ ಕ್ರೂಢೀಕರಣ, ಬಣ ರಾಜಕೀಯ ಇವುಗಳಲ್ಲೇ ಮುಳುಗಿರುವ ಕರ್ನಾಟಕ ಕಾಂಗ್ರೆಸ್‌ ಸರ್ಕಾರದ ಸಚಿವರಿಗೆ ಆಡಳಿತ ಮೇಲೆ ಆಸಕ್ತಿಯೂ ಇಲ್ಲ, ಅಧಿಕಾರಿಗಳ ಮೇಲೆ ಹಿಡಿತವೂ ಇಲ್ಲ. ಹೀಗಿರುವಾಗ ಇನ್ನು ಅಧಿಕಾರಿಗಳು ನಡೆಸುವ ಸಭೆಗಳು ಕೇವಲ ಕಾಟಾಚಾರವಲ್ಲದೆ ಮತ್ತೇನಾಗಲು ಸಾಧ್ಯ?

Previous articleಸಿಎಂ ಸಿದ್ದು ಕುಟುಂಬದ ವಿಚಾರಣೆಗೆ ಇಡಿ ಸಿದ್ಧತೆ
Next article127 ಹೊಸ ಬಸ್‌ಗಳಿಗೆ ಚಾಲನೆ