ಜಮೀರ್‌ಗೆ ಮಸಿ ಬಳಿದರೆ ೧ ಲಕ್ಷ ರೂ. ಬಹುಮಾನ

0
24

ಬೆಂಗಳೂರು: ಸಚಿವ ಜಮೀರ್ ಮುಖಕ್ಕೆ ಮಸಿ ಬಳಿದರೆ ೧ ಲಕ್ಷ ರೂ. ಬಹುಮಾನ ನೀಡುವುದಾಗಿ ಕನ್ನಡಪರ ಸಂಘಟನೆ ಮುಖಂಡರೊಬ್ಬರು ಘೋಷಣೆ ಮಾಡಿದ್ದಾರೆ.
ಚನ್ನಪಟ್ಟಣ ಉಪಚುನಾವಣೆಯ ಪ್ರಚಾರದ ಸಂದರ್ಭ ಸಚಿವ ಜಮೀರ್ ಅಹಮದ್ ಖಾನ್ ಅವರು ಕನ್ನಡ ಬದಲು ಉರ್ದು ಭಾಷೆಯಲ್ಲಿ ಮಾತನಾಡಿದ್ದಕ್ಕೆ ಕನ್ನಡ ಪರ ಹೋರಾಟಗಾರರು ಕಿಡಿಯಾಗಿದ್ದಾರೆ. ಕನ್ನಡವನ್ನು ನಿರ್ಲಕ್ಷಿಸಿದ ಜಮೀರ್ ಅಹ್ಮದ್ ಖಾನ್ ಅವರಿಗೆ ಮಸಿ ಬಳಿದರೆ ೧ ಲಕ್ಷ ರೂ. ಬಹುಮಾನ ನೀಡುವುದಾಗಿ ಹೇಳಿದ್ದಾರೆ.
ಕನ್ನಡ ಪರ ಸಂಘಟನೆಗಳ ಸರ್ವ ಸಂಘಟನೆ ಒಕ್ಕೂಟದ ರಾಜ್ಯಾಧ್ಯಕ್ಷ ಸಿಎಂ ಶಿವಕುಮಾರ್ ನಾಯ್ಕ್ ಅವರು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದು, ಜಮೀರ್ ಅಹ್ಮದ್ ಅವರು ಕನ್ನಡದಲ್ಲಿ ಮಾತನಾಡುತ್ತಿಲ್ಲ. ಚನ್ನಪಟ್ಟಣ ಹಾಗೂ ಉಪ ಚುನಾವಣೆಗಳ ಪ್ರಚಾರದ ವೇಳೆ ಉರ್ದು ಮಾತನಾಡುತ್ತಿದ್ದಾರೆ. ಕನ್ನಡ ಮಾತನಾಡದ ಜಮೀರ್ ಅವರ ಮೇಲೆ ನಾನೇ ಖುದ್ದಾಗಿ ಮಸಿ ಬಳಿಯುತ್ತೇನೆ. ಯಾರಾದರೂ ಕನ್ನಡಿಗರು ಮಸಿ ಬಳಿದರೆ ಅವರಿಗೆ ಒಂದು ಲಕ್ಷ ರೂ. ಬಹುಮಾನ ಕೊಡಲಾಗುವುದು ಎಂದು ಸಿಎಂ ಶಿವಕುಮಾರ್ ನಾಯ್ಕ್ ಹೇಳಿಕೊಂಡಿದ್ದಾರೆ.

Previous articleನಾಯಿ ಜತೆ ಅಸಭ್ಯ ವರ್ತನೆ: ಆರೋಪಿ ಬಂಧನ
Next articleರಾಹುಲ್ ಶರ್ಟ್‌ನಲ್ಲಿ ʻಐ ಲವ್ ವಯನಾಡ್ʼ