ತೊಂದರೆ ಆಗಿದ್ದಲ್ಲಿ ಕ್ಷಮಿಸಿ

0
39

ಬಳ್ಳಾರಿ: ಇಷ್ಟು ದಿನ ನನ್ನಿಂದ ನಿಮಗೆಲ್ಲ ತೊಂದರೆಯಾಗಿದೆ. ಕ್ಷಮೆ ಇರಲಿ, ನನ್ನೆಲ್ಲ ತಪ್ಪುಗಳನ್ನು ತಿದ್ದಿಕೊಳ್ಳುವೆ. ಬದಲಾಗುವೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿಯಾಗಿ ಮಧ್ಯಂತರ ಜಾಮೀನು ಮೇಲೆ ಬುಧವಾರ ಬಿಡುಗಡೆಯಾದ ನಟ ದರ್ಶನ್ ಬಳ್ಳಾರಿ ಜೈಲಿನಿಂದ ಹೊರಬರುವ ಮುನ್ನ ಜೈಲು ಅಧಿಕಾರಿಗಳ ಮುಂದೆ ಹೇಳಿದ ಮಾತಿದು.
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ಬಳಿಕ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರವಾದಾಗಿಂದ ಬರೋಬ್ಬರಿ ೬೫ ದಿನಗಳ ಕಾಲ ಬಳ್ಳಾರಿ ಜೈಲಿನಲ್ಲಿಯೇ ಬಂಧಿಯಾಗಿದ್ದರು. ಇಲ್ಲಿನ ಪರಿಸ್ಥಿತಿಗೆ ಎದೆಗುಂದಿದ್ದ ದರ್ಶನ್ ಜೈಲು ಅಧಿಕಾರಿಗಳ ಮುಂದೆ ಒಂದೊಂದೆ ಬೇಡಿಕೆ ಇಡುತ್ತಿದ್ದರು. ದರ್ಶನ್ ಬೇಡಿಕೆಗಳನ್ನು ಪೂರೈಸಲು ಜೈಲು ಸಿಬ್ಬಂದಿ ಹೆಣಗಾಡುತ್ತಿದ್ದರು. ಅತ್ತ ಜೈಲು ನಿಯಮ ಪಾಲಿಸುವುದು, ದರ್ಶನ್ ಮೆಡಿಕಲ್ ವರದಿಗಳ ಪ್ರಕಾರ ಸೌಲಭ್ಯ ನೀಡುವುದು ಜೈಲರ್‌ಗಳಿಗೆ ಸವಾಲು ಆಗಿತ್ತು. ಒಬ್ಬೊಂಟಿ ಆಗಿರುತ್ತಿದ್ದ ದರ್ಶನ್‌ಗೆ ಆಗಾಗ ಜೈಲು ಸಿಬ್ಬಂದಿಗಳೇ ಕಷ್ಟ-ನಷ್ಟ ಕೇಳಲು ಜತೆಯಾಗುತ್ತಿದ್ದರು. ಇದೇ ಕಾರಣಕ್ಕೆ ಮಧ್ಯಂತರ ಜಾಮೀನು ಆದೇಶದಿಂದ ಹೊರ ಬರುವ ಮುನ್ನ ಜೈಲು ಅಧೀಕ್ಷಕಿ ಸೇರಿ ಇತರೆ ವಾರ್ಡ್‌ಗಳನ್ನು ಭೇಟಿಯಾಗಿ ಕ್ಷಮೆ ಮತ್ತು ಧನ್ಯವಾದಗಳನ್ನು ಸಲ್ಲಿಸಿ ಹೊರಬಂದಿದ್ದಾರೆ.

Previous articleನೀಡಿದವರಿಗೇ ಮತ್ತೆ ಪ್ರಶಸ್ತಿ ನೀಡಿ ಎಡವಟ್ಟು!
Next articleಸದ್ದಿಲ್ಲದ ಕ್ರಾಂತಿಗೆ ಕರುನಾಡು ಸಜ್ಜು