Home Advertisement
Home ತಾಜಾ ಸುದ್ದಿ ಭತ್ತಕ್ಕೆ ಬೆಂಬಲ ಬೆಲೆ ನೀಡಿದ ಕೇಂದ್ರ ಸರ್ಕಾರ

ಭತ್ತಕ್ಕೆ ಬೆಂಬಲ ಬೆಲೆ ನೀಡಿದ ಕೇಂದ್ರ ಸರ್ಕಾರ

0
79

ಬೆಂಗಳೂರು: ಕೇಂದ್ರ ಸರ್ಕಾರ ಭತ್ತಕ್ಕೆ 2 ಸಾವಿರದ 300 ರೂಪಾಯಿ ಬೆಂಬಲ ಬೆಲೆ ನಿಗದಿ ಮಾಡಿದ್ದು, ಅನ್ನದಾತರಿಗೆ ದೀಪಾವಳಿಯ ಉಡುಗೊರೆ ನೀಡಿದೆ ಎಂದು ಕೇಂದ್ರ ಆಹಾರ ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ.
ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ 185 ಲಕ್ಷ ಟನ್ ಭತ್ತ ಹಾಗೂ 124 ಲಕ್ಷ ಟನ್ ಅಕ್ಕಿ ಸಂಗ್ರಹ ಮಾಡುವ ಯೋಜನೆ ಹೊಂದಲಾಗಿದೆ. 2013-14ರಲ್ಲಿ ಪ್ರತಿ ಕ್ವಿಂಟಾಲ್ ಭತ್ತಕ್ಕೆ 1 ಸಾವಿರದ 310 ರೂಪಾಯಿ ನೀಡಲಾಗುತ್ತಿತ್ತು. ಇದೀಗ ಆ ಮೊತ್ತ 2 ಸಾವಿರದ 300 ರೂಪಾಯಿಗೆ ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ. ಭತ್ತ ಬೆಳೆಗಾರರ ಆತಂಕ ಪಡುವ ಅಗತ್ಯವಿಲ್ಲ. ಪ್ರಸ್ತುತ ಮುಂಗಾರು ಹಂಗಾಮು ಭತ್ತ ಸಂಗ್ರಹಕ್ಕೆ ಸಾಕಷ್ಟು ಸ್ಥಳವಿದೆ. ಪ್ರಸ್ತುತ 14 ಎಲ್‌ಎಂಟಿ ಭತ್ತ ಸಂಗ್ರಹಕ್ಕೆ ಸ್ಥಳಾವಕಾಶವಿದೆ. ಪಂಜಾಬಿನಲ್ಲಿ ಸಂಗ್ರಹಿಸಿರುವ ಅಕ್ಕಿಯನ್ನು ತ್ವರಿತವಾಗಿ ಸ್ಥಳಾಂತರಿಸಲಾಗುತ್ತಿದೆ , ಅಕ್ಟೋಬರ್ 1ರಿಂದ 2 ಸಾವಿರದ 700 ಮಂಡಿಗಳಲ್ಲಿ ಭತ್ತ ಸಂಗ್ರಹಣೆ ಪ್ರಾರಂಭವಾಗಿದ್ದು, ಇದುವರೆಗೂ 50 ಲಕ್ಷ ಮೆಟ್ರಿಕ್ ಟನ್ ಭತ್ತ ಸಂಗ್ರಹಿಸಲಾಗಿದೆ. ಅಕ್ಕಿ ಗಿರಣಿದಾರರಿಗೆ ದೂರು ಪರಿಹಾರಕ್ಕಾಗಿ ಆನ್ ಲೈನ್ ಪೋರ್ಟಲ್ ಅನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದು ಹೇಳಿದ್ದಾರೆ. ಭತ್ತದ ಪ್ರಸ್ತುತ ಟರ್ನ್ ಔಟ್ ಅನುಪಾತ ಮತ್ತು ಇನ್ನಿತರ ವಿಷಯಗಳನ್ನು ಪರಿಶೀಲಿಸಲು ಐಐಟಿ ಕರಗ್ ಪುರವನ್ನು ನಿಯೋಜಿಸಲಾಗಿದೆ. 15 ದಿನಗಳ ಕಾಯುವ ಅವಧಿ ಮೀರಿ ಗೊತ್ತುಪಡಿಸಿದ ಡಿಪೋಗಳಲ್ಲಿ ಖಾಲಿ ಜಾಗದ ಲಭ್ಯತೆ ಸಂದರ್ಭದಲ್ಲಿ ಹೆಚ್ಚುವರಿ ಸಾರಿಗೆ ಶುಲ್ಕ ಅನುಮತಿಸಲಾಗುವುದು, ಅಕ್ಕಿ ಗಿರಣಿದಾರರಿಗೆ ದೂರು ಪರಿಹಾರಕ್ಕಾಗಿ ಆನ್‌ಲೈನ್ ಪೋರ್ಟಲ್ ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದೂ ಸಚಿವ ಪ್ರಲ್ಹಾದ ಜೋಶಿ ಮಾಹಿತಿ ನೀಡಿದರು.

Previous articleಧಾರವಾಡ ಜಿಲ್ಲೆಯಲ್ಲೂ ರೈತನ ಪಹಣಿಯಲ್ಲಿ `ವಕ್ಫ್’ ಹೆಸರು ದಾಖಲು!
Next articleಯುದ್ಧ ವಿಮಾನ ತಯಾರಿಕ ಘಟಕ ಉದ್ಘಾಟಿಸಿದ ಮೋದಿ