Home ತಾಜಾ ಸುದ್ದಿ ದರ್ಶನ್ ಭೇಟಿ ಮಾಡಿದ ಪತ್ನಿ ವಿಜಯಲಕ್ಷ್ಮೀ

ದರ್ಶನ್ ಭೇಟಿ ಮಾಡಿದ ಪತ್ನಿ ವಿಜಯಲಕ್ಷ್ಮೀ

0
67

ಬಳ್ಳಾರಿ: ಜಾಮೀನು ಸಿಗದೆ, ಬೆನ್ನು ನೋವಿನ ಸಮಸ್ಯೆ ನಿವಾರಣೆ ಇಲ್ಲದೇ ಬಳಲುತ್ತಿರುವ ಕೊಲೆ ಆರೋಪಿ, ನಟ ದರ್ಶನ್‌ರನ್ನು ಪತ್ನಿ ವಿಜಯಲಕ್ಷ್ಮೀ ಶುಕ್ರವಾರ ಭೇಟಿ ಮಾಡಿದರು.
ಮೈದುನ ದಿನಕರ್ ಜತೆ ಬಳ್ಳಾರಿಗೆ ಜೈಲಿಗೆ ಆಗಮಿಸಿದ ವಿಜಯಲಕ್ಷ್ಮಿ ದರ್ಶನ್‌ಗಾಗಿ ಎರಡು ಬ್ಯಾಗ್‌ಗಳಲ್ಲಿ ಬಟ್ಟೆ, ಡ್ರೈಫುಡ್ಸ್ ತಂದಿದ್ದರು. ಸಂದರ್ಶಕರ ಕೊಠಡಿಯಲ್ಲಿ ಅರ್ಧಗಂಟೆ ಕಾಲ ಚರ್ಚೆ ನಡೆಸಿದರು. ಹೈಕೋರ್ಟ್‌ನಲ್ಲಿ ಜಾಮೀನಿಗಾಗಿ ಅರ್ಜಿ ಹಾಕಿರುವ ಕುರಿತು ವಿಜಯಲಕ್ಷ್ಮೀ ದರ್ಶನ್‌ಗೆ ಮಾಹಿತಿ ನೀಡಿದರು. ಅಲ್ಲದೇ ಸೆಷನ್ ಕೋರ್ಟ್‌ನಲ್ಲಿ ಬೇಲ್ ತಿರಸ್ಕೃತ ಆಗಿದ್ದ ಕಾರಣಗಳನ್ನು ವಿವರಿಸಿದ್ದಾರೆ ಎನ್ನಲಾಗಿದೆ. ಬೆನ್ನು ನೋವಿನ ಸಮಸ್ಯೆ ಎದುರಿಸುತ್ತಿರುವ ದರ್ಶನ್‌ಗೆ ಬಳ್ಳಾರಿ ಜೈಲಿನಲ್ಲಿ ಮೆಡಿಕಲ್ ಬೆಡ್, ದಿಂಬು ಪೂರೈಸಿರುವ ಮಾಹಿತಿಯನ್ನು ದರ್ಶನ್ ಪತ್ನಿ ಜತೆ ಹಂಚಿಕೊಂಡಿದ್ದಾರೆ.