ಕಾರ್ಗಿಲ್ ವಿಜಯ ನಮ್ಮ ದೇಶದ ಹೆಮ್ಮೆ

0
45

ಕುಳಗೇರಿ ಕ್ರಾಸ್/ ಬಾಗಲಕೋಟೆ: ಹೆತ್ತ ತಾಯಿ ಹೊತ್ತ ಭೂಮಿ ಸ್ವರ್ಗಕ್ಕಿಂತಲೂ ಮಿಗಿಲು ಈ ಎರಡನ್ನು ಎದೆಯಿಲ್ಲಿಟ್ಟು ಕಾಪಾಡಬೇಕು. ಪರಕೀಯರಿಂದ ಕಾರ್ಗಿಲ್ ಪ್ರದೇಶವನ್ನು ಕಾಪಾಡಿ ವಿಜಯ ಸಾದಿಸಿ 25 ವರ್ಷಗಳು ಪೂರ್ಣಗೊಂಡಿವೆ. ಕಾರ್ಗಿಲ್ ವಿಜಯ ನಮ್ಮ ದೇಶದ ಹೆಮ್ಮೆ ಆ ಹಿನ್ನೆಲೆಯಲ್ಲಿ ದೊರೆಸ್ವಾಮಿಮಠ ಸೈನಿಕರಿಗೆ ಗೌರವ ಸೂಚಿಸುವ ಸದುದ್ಧೇಶದಿಂದ ವಿಶಿಷ್ಠ ಮತ್ತು ವಿನೂತನ ಕಾರ್ಯಕ್ರಮ ಹಮ್ಮಿಕೊಂಡು ಜನಜಾಗೃತಿಯನ್ನು ಮಾಡಿದೆ ಇದು ಇತಿಹಾಸದ ಪುಟಗಳಲ್ಲಿ ಅಜರಾಮರ ಎಂದು ಮೇಜರ್ ಸಿದ್ಧಲಿಂಗಯ್ಯ ಹಿರೇಮಠ ಹೇಳಿದರು.
ಅವರು ಭೈರನಹಟ್ಟಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಪೂಜ್ಯ ಶ್ರೀದೊರೆಸ್ವಾಮಿಗಳ ಪುಣ್ಯಸ್ಮರಣೋತ್ಸವ(ನಮ್ಮೂರ ಜಾತ್ರೆ-2024) ನಿಮಿತ್ಯ ಕಾರ್ಗಿಲ್ ವಿಜಯೋತ್ಸವ 25ನೇ ವರ್ಷಾಚರಣೆ ಪ್ರಯುಕ್ತ ಸ್ವಾತಂತ್ರ್ಯವೀರ ಬಾಬಾಸಾಹೇಬರ ವೇದಿಕೆಯಲ್ಲಿ ಮಾತನಾಡಿದ ಅವರು ಚೊಳಚಗುಡ್ಡದಿಂದ ಸಾಗಿಬಂದ ಕಾರ್ಗಿಲ್ ಜ್ಯೋತಿ ರಥಯಾತ್ರೆ ಸ್ವಾಗತ ಹಾಗೂ 25ಕಾರ್ಗಿಲ್ ಕಲಿಗಳಿಗೆ ಸನ್ಮಾನ ಹಾಗೂ ಕಾರ್ಗಿಲ್ ಕಲಿಗಳ ಯಶೋಗಾಥೆ ಸಮಾರೋಪ ಸಮಾರಂಭದಲ್ಲಿ ಸಮಾರೋಪ ನುಡಿಗಳನ್ನಾಡಿದರು.
ಕಾರ್ಗಿಲ್ ಯುದ್ದ ನಮ್ಮ ದೇಶದ ಹೆಮ್ಮೆಯ ಸಂಕೇತ ಅದು ಸೈನಿಕರ ತ್ಯಾಗ ಬಲಿದಾನದ ಪ್ರತೀಕವಾಗಿದೆ. ಇಂದಿನ ಮಕ್ಕಳಲ್ಲಿ ಹಾಗೂ ಯುವ ಸಮುದಾಯದಲ್ಲಿ ನಾನು ನನ್ನದು ಎನ್ನುವ ಮನೋಭಾವನೆ ಬಿಟ್ಟು ನಾವು ನಮ್ಮೋರು ಎಂಬ ದೇಶಾಭಿಮಾನದ ಜೊತೆಗೆ
ರಾಷ್ಟ್ರಾಭಿಮಾನ ಬೆಳೆಯಬೇಕಿದೆ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕರಾದ ಸಿ ಸಿ ಪಾಟೀಲ ದೇಶ ನನಗೇನು ಕೊಟ್ಟಿದೆ ಎನ್ನುವ ಬದಲಾಗಿ ದೇಶಕ್ಕೆ ನಾನೇನು ಮಾಡಿದೆ ಎಂದು ಅರಿತುಕೊಳ್ಳಬೇಕಾಗಿದೆ. ದೇಶದ ಪ್ರತಿಯೊಬ್ಬ ಯುವಕರಲ್ಲಿ ದೇಶಾಭಿಮಾನವನ್ನು ಬೆಳೆಸಬೇಕಾಗಿದೆ ಅಂತಹ ಕಾರ್ಯವನ್ನು ಶ್ರೀಮಠ ಮಾಡುತ್ತಿರುವುದು ಅಭಿನಂದನೀಯ. ನಾವೆಲ್ಲರೂ ದೇಶದಲ್ಲಿ ಇಷ್ಟೊಂದು ಸುಭದ್ರವಾಗಿರುವುದಕ್ಕೆ ಮುಖ್ಯ ಕಾರಣ ನಮ್ಮ ಹೆಮ್ಮೆಯ ಸೈನಿಕರು ಅವರಿಗೆ ಪ್ರತಿಯೊಬ್ಬರು ಗೌರವನ್ನು ನೀಡಬೇಕಾಗಿರುವುದು ಆದ್ಯಕರ್ತವ್ಯವಾಗಿದೆ ಎಂದು ಹೇಳಿದರು.

ಸಾನಿದ್ಯವಹಿಸಿ ಆಶೀರ್ವಚನ ನೀಡಿದ ಪೂಜ್ಯ ಶಾಂತಲಿಂಗ ಶ್ರೀಗಳು ಯುವಕರು ಸ್ವಯಂಪ್ರೇರಿತರಾಗಿ ದೇಶ ಸೇವೆಗೆ ಅಣಿಯಾಗಬೇಕು ನಮ್ಮ ದೇಶದ ಇತಿಹಾಸವನ್ನು ಅರಿತು ಸಂಸ್ಕೃತಿ ಮತ್ತು ಪರಂಪರೆಯನ್ನು ವಿಶ್ವಭೂಪಟದಲ್ಲಿ ಎತ್ತಿಹಿಡಿಯಬೇಕಾಗಿದೆ ಎಂದು ಯುವ ಸಮುದಾಯಕ್ಕೆ ಕರೆಕೊಟ್ಟರು.

ಮುಖಂಡರಾದ ವಿವೇಕ ಯಾವಗಲ್, ಧಾರವಾಡ ಕಾರ್ಗಿಲ್ ಸ್ಥೂಪದ ಅಧ್ಯಕ್ಷ ಚಂದ್ರಶೇಖರ ಅಮಿನಗಡ, ಬಸವರಾಜ ಮುಕ್ಕುಪ್ಪಿ, ಸಾವಿತ್ರಿ ಯಶವಂತ ಕೋಲಕಾರ, ಬಸಲಿಂಗಪ್ಪ ಮುಂಡರಗಿ, ವೆಂಕಪ್ಪ ಭಾವಿ, ವೀರನಗೌಡ ಪಾಟೀಲ, ಷಣ್ಮುಖಪ್ಪ ಹಳೆಹೊಳಿ, ಬಿ ಬಿ ಐನಾಪೂರ, ಚಂದ್ರು ದಂಡಿನ, ಪ್ರಕಾಶಗೌಡ ತಿರಕನಗೌಡ್ರ, ಪತ್ರಯ್ಯ ಹಿರೇಮಠ, ಗಂಗಯ್ಯಜ್ಜ ವಸ್ತ್ರದ ಸೇರಿದಂತೆ ಬಾದಾಮಿ ಹಾಗೂ ನರಗುಂದ ತಾಲೂಕಿನ ಎಲ್ಲ ಮಾಜಿ ಸೈನಿಕರು ಪ್ರಮುಖರು ಉಪಸ್ಥಿತರಿದ್ದರು.

Previous articleಮಂದಗತಿಯ ಸೇತುವೆ ನಿರ್ಮಾಣ : ಹಳ್ಳ ದಾಟಲು ಹರೋಹರ
Next articleಪಂಚಮಸಾಲಿಗೆ 2ಎ ಮೀಸಲಾತಿ: ಸಂವಿಧಾನದ ಆಶಯಕ್ಕೆ ಅನುಗುಣವಾಗಿ ತೀರ್ಮಾನ