ಬೆಂಗಳೂರು: ‘ಗೃಹಲಕ್ಷ್ಮಿ ಯೋಜನೆಯ ಸಾರ್ಥಕತೆಯೆಂಬಂತೆ ಗೃಹಲಕ್ಷ್ಮೀಯ ಹಣದಿಂದ ಊರಿಗೆ ಗ್ರಂಥಾಲಯ ನಿರ್ಮಾಣ ಮಾಡಿ ಮಾದರಿಯಾದ ಮಲ್ಲವ್ವ ಮೇಟಿ ಅವರ ಸಾಧನೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಕರ್ನಾಟಕ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಗೃಹಲಕ್ಷ್ಮಿ’ ಯೋಜನೆಯು ರಾಜ್ಯದ ಜನರ ಮನ ಗೆದ್ದಿರುವುದಕ್ಕೆ ರಾಯಬಾಗ್ ತಾಲೂಕಿನ ಮಂಟೂರು ಗ್ರಾಮದ ಮಲ್ಲವ್ವ ಮೇಟಿ ಅವರು ನಿರ್ಮಿಸಿರುವ ಗ್ರಂಥಾಲಯ ಜ್ವಲಂತ ಉದಾಹರಣೆಯಾಗಿದೆ, ಅವರ ಈ ಕಾರ್ಯ ನಿಜಕ್ಕೂ ಆವಿಸ್ಮರಣೀಯ. ಮಲ್ಲವಕ್ಕ ಮೇಟಿ ಅವರ ನಿಸ್ವಾರ್ಥ ಸೇವೆಯ ಹಿನ್ನೆಲೆಯಲ್ಲಿ ಚಿಕ್ಕ ಉಡುಗೊರೆಯಾಗಿ ರಾಷ್ಟ್ರಕವಿ ಕುವೆಂಪು ಅವರು ಬರೆದಿರುವ ‘ಕಾನೂರು ಹೆಗ್ಗಡಿತಿ’ ಎಂಬ ಪುಸ್ತಕವನ್ನು ಗ್ರಂಥಾಲಯಕ್ಕೆ ಕಳುಹಿಸುತ್ತಿದ್ದೇನೆ ಎಂದಿದ್ದಾರೆ.
Home ತಾಜಾ ಸುದ್ದಿ ಗೃಹಲಕ್ಷ್ಮೀ ಹಣದಿಂದ ಗ್ರಂಥಾಲಯ ನಿರ್ಮಾಣ ಮಾಡಿದ ಮಲ್ಲವಕ್ಕನಿಗೆ ಕಾನೂರು ಹೆಗ್ಗಡಿತಿ ನೀಡಿದ ಹೆಬ್ಬಾಳ್ಕರ್