ದಸರಾ ಕವಿಗೋಷ್ಠಿಯಲ್ಲಿ ಈ ಬಾರಿ ಕವಿಗಳು ವಾಚಿಸಿದ ಕಾವ್ಯಗಳ ಒಂದೊಂದು ಸಾಲುಗಳೂ ಕರುನಾಡ ಜನತೆಯ ಹೃದಯದಲ್ಲಿ ಅಚ್ಚು ಒತ್ತಿದಂತೆ ಸ್ಥಾಪಿತವಾಗಿವೆ. ಇದನ್ನು ನಮ್ಮ ಜೀವ ಇರುವ ವರೆಗೂ ಮರೆಯುವುದಿಲ್ಲ ಎಂದು ಮಾತನಾಡುತ್ತಿದ್ದಾರೆ. ಕವಿಪುಂಗವರು ವಾಚಿಸಿದ ಕವನಗಳನ್ನು ಸಂಕ್ಷಿಪ್ತವಾಗಿ ಕೊಡಲಾಗಿದೆ…
ಮದ್ರಾಮಣ್ಣ…
ನಾನು ಅಣ್ಣರ ಅಣ್ಣ ಮದ್ರಾಮಣ್ಣ
ಈ ಮಂದಿ ದಿನಾಲೂ ಅಂತಾವೆ ಕೊಡಣ್ಣ… ಕೊಡಣ್ಣ.. ಆದರೆ ನಾನು ಹ್ಹ..ಹ್ಹ.. ಕೊಡಲ್ಲ… ಕೊಡಲ್ಲ.. ಕೊಡಲ್ಲ
ಸುಮಾರಣ್ಣ…
ನಂದೇನು ಇಲ್ಲ ತಪ್ಪು
ಅವರ ಸಾಹೇಬನೇ ಪಪ್ಪು
ನಂದೇನಿದ್ದರೂ ಬ್ರದರ್… ಬ್ರದರ್
ಸಿಟ್ಯೂರಪ್ಪ..
ನಾನಿಲ್ಲ ಮೊದಲಿನಂಗೆ
ಸುಮ್ಮನೇ ಹಾಕ್ತಾರೆ ಕೇಸು
ನನ್ನ ಕಂದನೇ ಈಗ ಬಾಸು
ಮತೀಸ ಕೊರ್ಕಿಬೊಳಿ
ಶುರುವಾಗಿದೆ ನನ್ನ ಯಾತ್ರೆ
ಕುರ್ಚಿ ಸಿಕ್ಲಮೇಲೆ ನಮ್ಮ ಜಾತ್ರೆ
ನಮಗೈತಿ ಅವರ ಆಶೀರ್ವಾದ
ಅವಂದೊಂದೇ ವಿತಂಡವಾದ
ಬಂಡೆಸಿವು..
ನಾನು ಅವರಿಗೆಲ್ಲ ಬಂಡೆ
ಈಗ ಕಾಣಬಾರದ್ದು ಕಂಡೆ
ಕುರ್ಚಿ ಕೊಡುವ ಲಕ್ಷಣಗಳಿಲ್ಲ
ಅದು ಇದ್ದರೂ ನಂದಲ್ಲ… ನಂದಲ್ಲ
ಇವರಲ್ಲದೇ ಲೇವಣ್ಣನವರ ಕಾವ್ಯವಂತೂ ನೆರೆದವರ ಕಣ್ಣಲ್ಲಿ ನೀರು ತರಿಸಿತ್ತು. ಗುತ್ನಾಳಣ್ಣ… ಗುನಿರತ್ನ… ಗುಜಯೇಂದ್ರ… ಬಿಎಂ ಟಾಪೀಲ.. ಸಿವನೂರು ಸ್ಯಾಮಸಂಕರ ಇನ್ನೂ ಹಲವರ ಕವನಗಳು ಕೇಳುಗರ ಕಿವಿಯಲ್ಲಿ ಸೀಸ ಸುರಿದಂತಾಗಿತ್ತು.