ಕೆಂಭಾವಿ: ನಗರ ಪಟ್ಟಣಗಳ ಸ್ವಚ್ಚತೆಗೆ ಹಗಲಿರುಳು
ಶ್ರಮ ವಹಿಸುತ್ತಿರುವ ಪೌರ ಕಾರ್ಮಿಕರ ಕಾರ್ಯ ತುಂಬಾ ಶ್ಲಾಘನೀಯ ಎಂದು ಪುರಸಭೆ
ಆಡಳಿತಾಧಿಕಾರಿಯೂ ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ ಹೇಳಿದರು.
ಶನಿವಾರ ಪುರಸಭೆಯಲ್ಲಿ ಏರ್ಪಡಿಸಿದ್ದ ಪೌರ ಕಾರ್ಮಿಕರ ದಿನಾಚರಣೆಯ ಅಂಗವಾಗಿ ಭಾಗವಹಿಸಿ ಪೌರ ಕಾರ್ಮಿಕರಿಗೆ ಸನ್ಮಾನಿಸಿ ಮಾತನಾಡಿದ ಅವರು ಬಡಾವಣೆಯ ಪ್ರತಿಯೊಂದು ರಸ್ತೆಗಳು, ಚರಂಡಿಗಳು ಮಲಿನರಹಿತವಾಗಿರಬೇಕಾದರೆ ಪೌರ ಕಾರ್ಮಿಕರ ಶ್ರಮ ಅತ್ಯಮೂಲ್ಯ.
ಪೌರ ಕಾರ್ಮಿಕರು ನಿಜ ಕಾಯಕ ಯೋಗಿಗಳು ಅವರ ಪರಿಶ್ರಮ ಎಲ್ಲರಿಗೂ ಮಾದರಿ ಎಂದ ಅವರು ಸ್ವಚ್ಚತೆಯ ಜತೆ ಕಾರ್ಮಿಕರು
ಆರೋಗ್ಯ ಕಾಪಾಡಿಕೊಳ್ಳುವುದು ಅಷ್ಟೆ ಪ್ರಮುಖವಾದದ್ದು ಎಂದು ಕಿವಿ ಮಾತು ಹೇಳಿದ ಅವರು, ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವಲ್ಲಿ ಮುತುವರ್ಜಿ ವಹಿಸಬೇಕು ಈ ನಿಟ್ಟಿನಲ್ಲಿ ಸರ್ಕಾರ ಹಲವು ಯೋಜನೆಗಳನ್ನು ತಂದಿದ್ದು ಪುರಸಭೆಯಿಂದ ಸಿಗಬೇಕಾದ ಎಲ್ಲ
ಸೌಲಭ್ಯಗಳನ್ನು ಪೌರ ಕಾರ್ಮಿಕರಿಗೆ ಸಿಗುವಂತೆ ಮಾಡುವುದಾಗಿ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಪೌರ ಕಾರ್ಮಿಕರು ಅನುಭವಿಸುತ್ತಿರುವ ತೊಂದರೆಗಳ ಕುರಿತು ಪೌರ ಕಾರ್ಮಿಕರ ಪರವಾಗಿ ಶಾಂತಪ್ಪ
ಮತ್ತು ಮಹಾಂತೇಶ ದೊರೆ ಮನವಿ ಮಾಡಿ ಸೌಲಭ್ಯ ವದಗಿಸುವಂತೆ ಕೋರಿದರು.
ಮುಖ್ಯಾಧಿಕಾರಿ ಮಹ್ಮದ್ ಯುಸೂಫ್, ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಮಹ್ಮದ ವಲಿಸಾಬ, ಇಂಜೀನಿಯರ್ ಉದಯಕುಮಾರ, ಹಿರಿಯ ಪತ್ರಕರ್ತ ಸಂಜೀವರಾವ ಕುಲಕರ್ಣಿ, ಆರೋಗ್ಯ ನಿರೀಕ್ಷಕ, ಕರ ವಸೂಲಿಗಾರ ಭೀಮಣ್ಣ, ಮರೆಪ್ಪ, ಶೋಭಾ, ಮಹ್ಮದ ಮುಜಾಯಿದ, ಸೇರಿದಂತೆ ಪುರಸಭೆ ಸದಸ್ಯರು, ಇದ್ದರು. ಶಿಕ್ಷಕ ಬಂದೇನವಾಜ ನಾಲತವಾಡ ನಿರೂಪಣೆ ಮಾಡಿದರು, ಸಿದ್ರಾಮಯ್ಯ ಇಂಡಿ ಸ್ವಾಗತಿಸಿದರು.