ಮಳೆಗೆ ಕುಸಿದ ಮನೆ: ಮಣ್ಣಿನಲ್ಲಿ ಸಿಲುಕಿದ ವ್ಯಕ್ತಿ ರಕ್ಷಣೆ

0
9

ಗಂಗಾವತಿ: ಕಳೆದ ಕೆಲ ದಿನಗಳಿಂದ ತಾಲೂಕಿನಲ್ಲಿ ಸುರಿದ ಭಾರಿ ಮಳೆಯಿಂದ ಮನೆಯೊಂದು ಕುಸಿದು ಬಿದ್ದು ವ್ಯಕ್ತಿಯೊಬ್ಬ ಮಣ್ಣಿನಲ್ಲಿ ಸಿಲುಕಿಕೊಂಡ ಘಟನೆ ನಡೆದಿದೆ.
ತಾಲೂಕಿನ ಢಣಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮನೆಯ ಮೇಲ್ಛಾವಣಿ ಕುಸಿದು ಅದರ ಅಡಿಯಲ್ಲಿ ಸಿಲುಕಿದ್ದ ವ್ಯಕ್ತಿಯನ್ನು ಗ್ರಾಮಸ್ಥರು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ, ಪ್ರಕಾಶ್ ಪ್ರಾಣಾಪಾಯದಿಂದ ಪಾರಾದ ವ್ಯಕ್ತಿ. 45 ವರ್ಷದ ಪ್ರಕಾಶ ಎಂಬುವರು
ಮನೆಯೊಳಗೆ ಚಾರ್ಜ್‌ ಇಟ್ಟಿದ್ದ ಮೊಬೈಲ್‌ ತರಲು ಒಳಗಡೆ ಹೋದಾಗ ಮನೆ ಕುಸಿದು ಅವರ ಮೇಲೆ ಬಿದ್ದಿದ್ದರಿಂದ ದೇಹದ ಮುಕ್ಕಾಲು ಭಾಗ ಮಣ್ಣಿನಲ್ಲಿ ಹೂತು ಹೋಗಿತ್ತು. ಗ್ರಾಮಸ್ಥರು ಕೂಡಲೇ ಸ್ಥಳಕ್ಕೆ ಆಗಮಿಸಿ ಮಣ್ಣನ್ನು ತೆರೆವುಗೊಳಿಸಿ ಅವರನ್ನ ರಕ್ಷಿಸಿ ಗಂಗಾವತಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

Previous articleಪರಮೇಶ್ವರ, ರಾಹುಲ್ ಗಾಂಧಿಯಂತೆ ಮಾತನಾಡಬಾರದು
Next articleಇಂದು ಹುಬ್ಬಳ್ಳಿಯಲ್ಲಿ ಮಾರ್ಟಿನ್‌…