ಲಾರಿ – ಸ್ಕೂಟಿ ಅಪಘಾತದಲ್ಲಿ ಬೈಕ್ ಸವಾರ ಸಾವು

0
21
ಸಾವು

ಇಳಕಲ್ : ಸೊಲ್ಲಾಪುರ- ಮಂಗಳೂರು ರಾಷ್ಟ್ರೀಯ ಹೆದ್ದಾರಿ ೫೦ ರ ಗುಗಲಮರಿ ಗ್ರಾಮದ ಬಳಿ ನಡೆದ ಲಾರಿ- ಸ್ಕೂಟಿ ಅಪಘಾತದಲ್ಲಿ ಬೈಕ್ ಸವಾರನೊಬ್ಬ ಮೃತಪಟ್ಟ ಘಟನೆ ನಡೆದಿದೆ.
ಮರಿಗೌಡ ಹುಲಸಗೇರಿ ತನ್ನ ತಂದೆ ರಾಮಣ್ಣನ ಜೊತೆಗೆ ಗುಗಲಮರಿ ಗ್ರಾಮದ ದುರ್ಗಾದೇವಿ ದೇವಸ್ಥಾನಕ್ಕೆ ತೆರಳಿದ್ದರು. ಅಲ್ಲಿ ದರ್ಶನ ಮುಗಿಸಿಕೊಂಡು ಮರಳಿ ಇಳಕಲ್ ಗೆ ತೆರಳುವಾಗ ಕುಷ್ಟಗಿ ಕಡೆಯಿಂದ ಬಂದ ಲಾರಿ ಸ್ಕೂಟಿಗೆ ಹಾಯ್ದ ಕಾರಣ ಇಬ್ಬರೂ ಅಲ್ಲಿ ಬಿದ್ದು ಬಲವಾದ ಗಾಯಗಳಿಂದ ಪರದಾಡ ತೊಡಗಿದರು. ಇಳಕಲ್ ಗ್ರಾಮೀಣ ಪೋಲಿಸ್ ಠಾಣೆಯ ಪಿಎಸ್ ಐ ಮಲ್ಲು ಸತ್ತಿಗೊಂಡರ ಸ್ಥಳಕ್ಕೆ ಧಾವಿಸಿ ಗಾಯಗೊಂಡ ಮರಿಗೌಡನನ್ನು ಬಾಗಲಕೋಟ ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಯಿತು. ಜೀವನ್ಮರಣದ ಹೋರಾಟ ನಡೆಸಿದ ಮರಿಗೌಡ ಗುರುವಾರದಂದು ಮೃತಪಟ್ಟ ಎಂದು ಪೋಲಿಸ್ ಮೂಲಗಳು ತಿಳಿಸಿವೆ. ಲಾರಿ ಚಾಲಕನನ್ನು ಬಂಧಿಸಲಾಗಿದೆ ವಿಚಾರಣೆ ನಡೆದಿದೆ.

Previous articleಕಳ್ಳರು ಕಳ್ಳರು ಒಂದಾಗಿದ್ದಾರೆ
Next articleದರ್ಶನ್ ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆ