ಎರಡು ಕೋಟಿ ಚಿನ್ನಾಭರಣ ವಶ

0
35

ಧಾರವಾಡ: ಖಾಸಗಿ ಬಸ್‌ನಲ್ಲಿ ಎರಡು ಕೋಟಿಗೂ ಹೆಚ್ಚು ಮೌಲ್ಯದ ಚಿನ್ನಾಭರಣ ಸಾಗಿಸುತ್ತಿದ್ದ ವ್ಯಕ್ತಿಯನ್ನು ಗ್ರಾಮೀಣ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮುಂಬೈನಿಂದ ಬೆಂಗಳೂರಿಗೆ ಖಾಸಗಿ ಬಸ್‌ನಲ್ಲಿ ವ್ಯಕ್ತಿಯೋರ್ವ ಎರಡು ಕೋಟಿಗೂ ಅಧಿಕ ಮೌಲ್ಯದ ಚಿನ್ನಾಭರಣ ಸಾಗಾಟ‌ ಮಾಡುತ್ತಿದ್ದ. ಖಚಿತ ಮಾಹಿತಿ ಪಡೆದಿದ್ದ ಧಾರವಾಡ ಗ್ರಾಮೀಣ ಠಾಣೆ ಪೊಲೀಸರು ಸಮೀಪದ ನರೇಂದ್ರ ಕ್ರಾಸ್ ಹತ್ತಿರ ಬಸ್ ತಡೆದು ತಪಾಸಣೆ ನಡೆಸಿದಾಗ ಚಿನ್ನಾಭರಣ ದೊರೆತಿವೆ. ತಕ್ಷಣ ಚಿನ್ನಾಭರಣ ಮತ್ತು ವ್ಯಕ್ತಿಯನ್ನು ವಶಕ್ಕೆ ಪಡೆದಿರುವ ಗ್ರಾಮೀಣ ಪೊಲೀಸರು ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿತ್ತೋ ಏನೋ ಎನ್ನುವುದರ ಕುರಿತು ತಪಾಸಣೆ ನಡೆಸಿದ್ದಾರೆ.

Previous articleಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್ ಪುತ್ತೂರು ನಾಮಪತ್ರ ಸಲ್ಲಿಕೆ
Next articleಕಾಂಗ್ರೆಸ್ ಅಭ್ಯರ್ಥಿ ರಾಜು ಪೂಜಾರಿ ನಾಮಪತ್ರ ಸಲ್ಲಿಕೆ